

ಮೈಸೂರು ಜೋನ್ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್‌ನ 15 ವರ್ಷದೊಳಗಿನ ವಿಭಾಗದಲ್ಲಿ ಟೀಂ ಇಂಟೆನ್ಸ್ ಡ್ಯಾನ್ಸ್ ಸ್ಟುಡಿಯೋ ತಂಡ ಪ್ರಶಸ್ತಿ ಪಡೆದಿದೆ.
ನಗರದ ಶಾರದ ವಿಲಾಸ ಕಾಲೇಜು ಸಭಾಂಗಣದಲ್ಲಿ ಇತ್ತೇಚೆಗೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಭಿಷೇಕ್, ಡಿಂಪಲ್, ಮನ್ವಿತಾ, ನಿಹಾರಿಕಾ, ಧೀರಜ್, ಲಿಷಿತ, ಶ್ರೇಷ್ಠ, ಚರಿತ್, ಮಾಧುರ್ಯ, ಚರಿತ್ ಮಾದಪ್ಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪೃಥ್ವಿ ನಾಯಕ್ ತರಬೇತಿ ನೀಡಿದ್ದಾರೆ.