ಟಿವಿ, ಮೊಬೈಲ್ ಬದಲು ಸಾಹಿತ್ಯ ಕೃತಿ, ಪತ್ರಿಕೆಗಳನ್ನು ಓದಿ

9
Published on

ಅಭಿರುಚಿ ಬಳಗವು ಸಂಸ್ಥಾಪಕ ಎನ್.ವಿ.ರಮೇಶ್ ಅವರ 74ನೇ ಜನ್ಮದಿನದ ಅಂಗವಾಗಿ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಹಿತ್ಯೋತ್ಸವಕ್ಕೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಚಾಲನೆ ನೀಡಿದರು.

ಓದುವುದರಿಂದ ಜ್ಞಾನಾರ್ಜನೆಯ ಜತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದ್ದರಿಂದ ಟಿವಿ, ಮೊಬೈಲ್ ಬದಲು ಸಾಹಿತ್ಯ ಕೃತಿಗಳು ಹಾಗೂ ಪತ್ರಿಕೆಗಳನ್ನು ಓದುವ ಕಡೆ ಗಮನ ನೀಡುವಂತೆ ಅವರು ಸಲಹೆ ನೀಡಿದರು.

ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಗಡಿನಾಡು ಕಾಸರಗೋಡಿನಲ್ಲಿರುವಂತೆ ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಗಳೂರಿನ ಕೊಳ್ಚಪ್ಪೆ ಗೋವಿಂದಭಟ್, ಪ್ರದೀವ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.

ಲೇಖಕಿ ಬಿ.ಕೆ.ಮೀನಾಕ್ಷಿ ಕೃತಿ ಪರಿಚಯಿಸಿದರು. ಗಂಗಾವತಿಯ ಜಿ.ಶ್ರೀದೇವಿ ಕೃಷ್ಣಪ್ಪ ಹಿರೇಜಂತಕಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಮ.ನ. ಲತಾ ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net