"ಟಿಪ್ಪು ಕಪ್" ಕ್ರಿಕೆಟ್ ಪಂದ್ಯಾವಳಿ

Published on

ಚಾಮರಾಜನಗರ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆ.ಪಿ‌ ಮೊಹಲ್ಲಾ ಫ್ರೆಂಡ್ಸ್ ಅಸೋಸಿಯೇಷನ್ ಕ್ರಿಕೆಟ್ ಕ್ಲಬ್ ನಿಂದ ಶನಿವಾರ 7 ಓವರ್ ಗಳ "ಟಿಪ್ಪು ಕಪ್" ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಎರಡು ದಿನ ನಡೆಯುವ ಪಂದ್ಯಾವಳಿಯಲ್ಲಿ ಶನಿವಾರ ಟಿಪ್ಪು ಸ್ಟಾರ್, ರೈಸಿಂಗ್ ಸ್ಟಾರ್, ಎಂ.ಎಸ್ ಸ್ಟಾರ್, ಯಂಗ್ ಸ್ಟಾರ್ ತಂಡಗಳು ಪಾಲ್ಗೊಂಡವು. ಟಿಪ್ಪು ಸ್ಟಾರ್ ಮತ್ತು ರೈಸಿಂಗ್ ಸ್ಟಾರ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಟಿಪ್ಪು ಸ್ಟಾರ್ 7 ಓವರ್ ಗೆ 47 ರನ್ ಪೇರಿಸಿತು. ರೈಸಿಂಗ್ ಸ್ಟಾರ್ 45 ರನ್ ಗಳಿಸಿ ಪರಾಭವಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net