

ಬೈಲಹೊಂಗಲ: ಬಿಜೆಪಿ ಕಾರ್ಯಕರ್ತರಲ್ಲಿ ಟಿಕೆಟ್ ಬಗ್ಗೆ ಗೊಂದಲ ಬೇಡ. ಪದ ವರಿಷ್ಠರು ಸರ್ವೇ ಆಧರಿಸಿ ಬೈಲಹೊಂಗಲ ಮಾತ್ರವಲ್ಲ ಕರ್ನಾಟಕದ 224 ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡುವವರಿದ್ದಾರೆ. ಹಾಗಾಗಿ, ನಮ್ಮ ಗುರಿ ಪ ಬಲವರ್ಧನೆ ಈ ಕಡೆ ಮಾತ್ರ ಇರಲಿ ವಿನಾಕಾರಣ ವದಂತಿಗಳಿಗೆ ಕಿವಿಗೊಡದೆ ತಾವೆಲ್ಲರೂ ಪ ಸದೃಢವಾಗಲು ಶ್ರಮಿಸಬೇಕು ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾರ್ಯಕರ್ತರು, ಅಭಿಮಾನಿ ಬಳಗದಿಂದ ಆಯೋಜಿಸಿದ್ದ 62ನೇ ಹುಟ್ಟುಹಬ್ಬದ ನಿಮಿತ್ತ ಕರೊನಾ ವಾರಿಯರ್ಸ್ಗಳಾದ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಮಾತನಾಡಿದರು.
ಎರಡು ಬಾರಿ ಶಾಸಕನಾಗಿ ಪ್ರಾಮಾಣಿಕವಾಗಿ ಜನಸೇವೆ ಮಾಡಿದ ಆತ್ಮತೃಪ್ತಿ ನನಗಿದ್ದು, ಜನ ಶಕ್ತಿ ಮುಂದೆ ಯಾರೂ ದೊಡ್ಡರವಲ್ಲ, ಕಡಿಮೆಯೂ ಅಲ್ಲ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ, ಗೊಂದಲಗಳಿದ್ದರೆ ಎಲ್ಲವನ್ನು ಸರಿಪಡಿಸಿಕೊಂಡು ಬಿಜೆಪಿ ಪವನ್ನು ಮತ್ತೊಮ್ಮೆ ಅ-ಕಾರಕ್ಕೆ ತರುವ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ. ಪದ ಎಲ್ಲ ಹಿರಿಯ ನಾಯಕರು, ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಬರುವ ಚುನಾವಣೆಯಲ್ಲಿ ಪದ ಬಲವರ್ಧನೆಗೆ ಒತ್ತು ನೀಡಿ ಅವರ ಆಶೀರ್ವಾದದಿಂದ ಜನರ ಸೇವೆಗೆ ಸದಾ ಶ್ರಮಿಸುವುದಾಗಿ ತಿಳಿಸಿದರು.ಮತೇತ್ರದ 700ಕ್ಕೂ ಅಧಿ-ಕ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸುವ ಮೂಲಕ ಜನ್ಮದಿನ ಆಚರಿಸಿಕೊಂಡಿದ್ದು, ನನಗೆ ಸಂತೋಷವೆನಿಸಿದೆ ಎಂದರು.
ನಮ್ಮ ಮನೆತನದ ಹಿರಿಯರು ನಾಡಿಗೆ ಸಲ್ಲಿಸಿದ ಅಮೋ ಸೇವೆಯ ಲವಾಗಿ ಜನತೆ ನಮ್ಮ ಮೇಲೆ ಅಭಿಮಾನವಿಟ್ಟಿದ್ದು, ಅವರ ಅಭಿಮಾನಕ್ಕೆ ಚ್ಯುತಿ ಬರದಂತೆ ನಡೆದುಕೊಂಡು ಸ್ಪಂದಿಸುವೆ. ಮತೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕಿ ಹೆಚ್ಚಿನ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಅ-ಧಿಕಾರ ಇಲ್ಲದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿ ನನಗೆ ಆಶೀರ್ವಾದ ಮಾಡಿದ ಕಾರ್ಯಕರ್ತರೆ ನನ್ನ ದೇವರಾಗಿದ್ದು, ಮತೇತ್ರದ ಜನತೆಯ, ಕಾರ್ಯಕರ್ತರ ಋಣ ತೀರಿಸಲು ನನ್ನ ಬದುಕು ಮೀಸಲಿಡುವೆ ಎಂದರು.
ಹಿರೇಮಠ ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಪ್ರಭಾ ಅಕ್ಕ ಮಾತನಾಡಿ, ಸರಳ, ಸಜ್ಜನ ವ್ಯಕ್ತಿಯಾಗಿರುವ ಮೆಟಗುಡ್ಡ ಅವರ ಜನಸೇವೆ ಶ್ಲಾನೀಯ ಎಂದರು. ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ಜನರ ಆಶೀರ್ವಾದದಿಂದ ನಾಡಿನ ಜನತೆಗೆ ನಮ್ಮ ಕೈಲಾದ ಸಹಾಯ, ಸಹಕಾರ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ಉದ್ಯಮ ಸ್ಥಾಪಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮಹದಾಸೆ ಇದೆ. ರಕ್ತದಾನ ಮಾಡುತ್ತಿರುವ ಗೆಳೆಯರ ಕಾರ್ಯ ಶ್ಲಾನೀಯ ಎಂದರು. ರಾಜು ಬೊಳಶೆಟ್ಟಿ, ಸಿದ್ದಣ್ಣ ಮರಕುಂಬಿ ಮಾತನಾಡಿದರು.
ಹಿರಿಯರಾದ ತಿಪ್ಪಣ್ಣ ಬಿಳ್ಳೂರ, ಎಪಿಎಂಸಿ ಸದಸ್ಯ ಎಸ್.ಎಫ್. ಹರಕುಣಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಉದ್ಯಮಿ ಅನಿಲ ಮೆಟಗುಡ್ಡ, ಯುವ ಮುಖಂಡ ಕಾರ್ತಿಕ ಮಲ್ಲೂರ, ಜಗದೀಶ ಬೂದಿಹಾಳ, ದಯಾನಂದ ಪರಾಳಶೆಟ್ಟರ, ಸಂತೋಷ ಹಡಪದ, ಆನಂದ ತುರಮರಿ, ಸುಭಾಸ್ ತುರಮರಿ, ಪ್ರಪುಲ ಪಾಟೀಲ, ಸದಾನಂದ ನಾಗನೂರ,ಮಹಾಂತೇಶ ಮೆಟಗುಡ್ಡ, ಬಸವರಾಜ ಸಾಲಿಮಠ, ಬಾಬು ಪತ್ತೆನ್ನವರ, ಶಿವಮೂರ್ತಿ ಬೂದಯ್ಯನವರಮಠ, ಬಸವರಾಜ ಬೇಟಗೇರಿ, ಅಜ್ಜಪ್ಪ ಹೊಸೂರ, ಎಂ.ಎ. ನಾಯ್ಕ, ರಾಜೇಂದ್ರ ಸಂಗೊಳ್ಳಿ, ಶಿವಾನಂದ ಬಡ್ಡಿಮನಿ, ಅಶೋಕ ಮೆಟಗುಡ್ಡ, ಗಂಗಪ್ಪ ಮಲ್ಲಾರಿ, ಗದಿಗೆಪ್ಪ ಕುರಿ, ಬಸವರಾಜ ಮೆಣಸಿ, ವಾಸುದೇವ ಲೋಖಂಡೆ, ಜಗದೀಶ ಮೆಟಗುಡ್ಡ, ಆನಂದ ಬಾವಿಕಟ್ಟಿ, ಬಿ.ಬಿ. ನರಸನ್ನವರ, ಮಹಾಂತೇಶ ಹೊಸಮನಿ, ಸುನೀಲ ಮರಕುಂಬಿ, ನಾಗರಾಜ ಮರಕುಂಬಿ ಹಾಗೂ ಕಾರ್ಯಕರ್ತರು ಇದ್ದರು.
ರಕ್ತದಾನ, ಹಣ್ಣು ವಿತರಣೆ: ಜನ್ಮದಿನದ ಪ್ರಯುಕ್ತವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 251 ಅಭಿಮಾನಿಗಳು ರಕ್ತದಾನ ಮಾಡಿದರು. ಸಿದ್ದೇಶ್ವರ ಉದ್ಯಾನದ ಹತ್ತಿರ ಬಸವ ವನದಲ್ಲಿ 62 ಸಸಿ ನೆಡಲಾಯಿತು. ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಿಸಲಾಯಿತು. ಮಳಗಲಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಪಟ್ಟಣ ಹಾಗೂ ಹಳ್ಳಿಗಳಿಂದ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿ ಮೆಟಗುಡ್ಡ ಅವರಿಗೆ ಜನ್ಮದಿನದ ನಿಮಿತ್ತ ಶುಭ ಕೋರಿದರು. ನಾಡಿನ ಪೂಜ್ಯರು, ಹಿರಿಯರು ಆಶೀರ್ವದಿಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಶುಭಾಶಯಗಳ ಮಹಾಪೂರ ಹರಿದುಬಂತು.