ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಶಾಲೆ ಶಾಲೆಗೆ ಕ್ರೀಡಾಕಿಟ್ ವಿತರಣೆ

17NGD1
ನಂಜನಗೂಡು ತಾಲೂಕಿನ ಹುರ ಗ್ರಾಮದ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಶಾಲೆಗೆ ಮೈಸೂರಿನ ಅಭ್ಯುದಯ ಸಂಸ್ಥೆ ವತಿಯಿಂದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಫಣೀಂದ್ರ ಬೆಳ್ಳೂರು, ಪ್ರಕಾಶ್, ಮನೀಶ್, ಲಕ್ಷ್ಮಿನಾರಾಯಣ ಹಾಜರಿದ್ದರು.
Published on

ನಂಜನಗೂಡು: ತಾಲೂಕಿನ ಹುರ ಗ್ರಾಮದ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಶಾಲೆಯಲ್ಲಿ ಮೈಸೂರಿನ ಅಭ್ಯುದಯ ಸಂಸ್ಥೆ ವತಿಯಿಂದ ಸ್ವಾತಂತ್ರೃ ದಿನ ಆಚರಿಸಲಾಯಿತು.

ಮಕ್ಕಳಲ್ಲಿ ಕ್ರೀಡಾ ಸಾಮರ್ಥ್ಯ ಹೆಚ್ಚಿಸಲು ಮತ್ತು ರಾಜ್ಯಮಟ್ಟದ ಪಂದ್ಯಗಳಲ್ಲಿ ಸ್ಪರ್ಧಿಸಲು ಅನುಕೂಲವಾಗುವಂತೆ ಸಂಸ್ಥೆ ವತಿಯಿಂದ ಶಾಲೆಗೆ ಕ್ರೀಡಾಕಿಟ್‌ಗಳನ್ನು ನೀಡಲಾಯಿತು.

ಅಭ್ಯುದಯ ಸಂಸ್ಥೆಯ ಉಸ್ತುವಾರಿ ಫಣೀಂದ್ರ ಬೆಳ್ಳೂರು ಮಾತನಾಡಿ, ದೈಹಿಕ ಸಾಮರ್ಥ್ಯ ಹೆಚ್ಚಿಸಕೊಳ್ಳಲು ಕ್ರೀಡೆ ಉತ್ತಮ ಮಾರ್ಗ ಎಂದರು.
ಅಭ್ಯುದಯ ಸಂಸ್ಥೆಯು ವೈಜ್ಞಾನಿಕ ಶಿಕ್ಷಣವನ್ನು ಬೆಂಬಲಿಸುವ ಸಲುವಾಗಿ ಪ್ರಾಯೋಗಿಕ ಕಲಿಕೆಯೊಂದಿಗೆ 42 ಕೇಂದ್ರಗಳ ಮೂಲಕ ದೇಶದ ಸುಮಾರು 8,000 ಮಕ್ಕಳಿಗೆ ಸಹಾಯ ಮಾಡಿದೆ. ಅಭ್ಯುದಯವು ಮೈಸೂರಿನಲ್ಲಿ 18 ಉಚಿತ ಕಲಿಕಾ ಕೇಂದ್ರ ಮತ್ತು 30 ಸ್ವಯಂಸೇವಕ ಶಿಕ್ಷಕರನ್ನು ಹೊಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಡಳಿತಾತ್ಮಕ ಸೇವೆಗಳಿಗೆ ಸೇರಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನೂ ನೀಡುತ್ತಿದೆ. ಎಸ್ಸೆಸ್ಸೆಲ್ಸಿ ಓದುತ್ತಿರುವ ನೂರಾರು ವಿದ್ಯಾರ್ಥಿಗಳು ಪರಿಣಿತ ಉಪನ್ಯಾಸಕರಿಂದ ಉಚಿತ ಕಲಿಕೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್, ಅಭ್ಯುದಯದ ಸಂಯೋಜಕ ಮನೀಶ್, ಮಾಜಿ ಸೈನಿಕ ಬೆಳ್ಳೂರು ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.
ಚಿತ್ರ:17ಎನ್‌ಜಿಡಿ1
ನಂಜನಗೂಡು ತಾಲೂಕಿನ ಹುರ ಗ್ರಾಮದ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಶಾಲೆಗೆ ಮೈಸೂರಿನ ಅಭ್ಯುದಯ ಸಂಸ್ಥೆ ವತಿಯಿಂದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಫಣೀಂದ್ರ ಬೆಳ್ಳೂರು, ಪ್ರಕಾಶ್, ಮನೀಶ್, ಲಕ್ಷ್ಮಿನಾರಾಯಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net