

ಕಂಪ್ಲಿ: ಪರಿಸರ ಸಂರಕ್ಷಣೆಯೊಂದಿಗೆ ಧರ್ಮವಂತರಾಗಿ ಬಾಳುವವರಿಗೆ ಉತ್ತಮ ದಿನಗಳಿವೆ ಎಂದು ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ ಹೇಳಿದರು.
ಇಲ್ಲಿನ ಕಲ್ಯಾಣಚೌಕಿಮಠದಲ್ಲಿ ಮಂಗಳವಾರ ಯುಗಾದಿ ಪಾಡ್ಯ ನಿಮಿತ್ತ ಮಠದ ಸಂಪ್ರದಾಯದಂತೆ ಪಂಚಾಂಗ ಪಠಣ ಶಾಸ್ತ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಉಳಿದರೆ ಜೀವಸಂಕುಲ ಉಳಿದೀತು. ಮರ-ಗಿಡಗಳನ್ನು ಬೆಳೆಸುವ ಜೊತೆಗೆ, ನೀರಿನ ಮೂಲಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಬೆಳೆಯುವ ಕಾಳಿಗಿಂತ ಬೆಳೆದಿರುವ ಕಾಳುಗಳನ್ನು ವಿವೇಚನೆಯಿಂದ ಉಳಿಸಿ ಬಳಸಿಕೊಳ್ಳುವ ಜಾಣ್ಮೆ ಬೇಕಾಗಿದೆ. ಹಣ, ಅಧಿಕಾರಗಳಿಕೆಗಿಂತ ಮಾವನೀಯ, ನೈತಿಕ, ಪ್ರಾಮಾಣಿಕ ಮತ್ತು ಕಾಯಕ ನಿಷ್ಠೆಗೆ ಆಧ್ಯತೆ ನೀಡಬೇಕು.
ಇದನ್ನು ಓದಿ: ಅಮರೇಶ್ವರ ಸುಕ್ಷೇತ್ರ-ಬೃಹನ್ಮಠದಲ್ಲಿ ಪಂಚಾಂಗ ಪಠಣ
ಸರ್ವರೂ ಪ್ರೀತಿ, ಸಾಮರಸ್ಯ, ಭಾವೈಕ್ಯದಿಂದ ಜೀವಿಸಬೇಕಿದೆ. ಜ್ಯೋತಿಷ್ಯಶಾಸ್ತ್ರವು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದ್ದು, ಅದರ ತತ್ವ ಅರಿತುಕೊಳ್ಳುವ ಅಗತ್ಯತೆಯಿದೆ ಎಂದರು.
ಪಂಚಾಂಗಪಠಣದಲ್ಲಿ ಪ್ರಮುಖರಾದ ಪುಟ್ಟಿ ಸಚಿನ್, ಹೇಮಂತರಾಜ್, ಕೊಟ್ರೇಶ, ಕೆ.ಎಂ.ಪ್ರದೀಪ, ಅಶ್ವಿನಿ, ಭುವನೇಶ್ವರಿ, ಚಂದ್ರಿಕಾ, ವಿಶಾಲಾಕ್ಷಿ, ಎಲಿಗಾರ ವೆಂಕಟರೆಡ್ಡಿ, ರಾಘವೇಂದ್ರ, ಚನ್ನಬಸವ ಸೇರಿ ಇತರರಿದ್ದರು.
ಹೊಸನೆಲ್ಲೂಡಿ: ತಾಲೂಕಿನ ಹೊಸನೆಲ್ಲೂಡಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಕೊಟ್ರಯ್ಯಸ್ವಾಮಿ ತಾತನವರು ಹೊಸ ಪಂಚಾಂಗ ಓದಿದರು. ಪ್ರಮುಖರಾದ ಸೋಮನಗೌಡ, ರುದ್ರಯ್ಯಸ್ವಾಮಿ, ಮಂಜುನಾಥಗೌಡ, ಉಮೇಶಸ್ವಾಮಿ, ಯುವರಾಜಸ್ವಾಮಿ, ಸಣ್ಣ ವೀರನ ಗೌಡ, ರೇಣುಕಾ, ತಿಮ್ಮನಗೌಡ ಇತರರಿದ್ದರು.