ಜ್ಯೋತಿಷಶಾಸ್ತ್ರದಿಂದ ಲೋಕಕ್ಕೆ ಉಪಕಾರ

2
Published on

ಬಹುತೇಕ ಧರ್ಮಗಳಲ್ಲಿರುವ ಜ್ಯೋತಿಷಶಾಸ್ತ್ರದಿಂದ ಲೋಕಕ್ಕೆ ಉಪಕಾರ ಎಂದು ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.

ಆರಾಧ್ಯ ಕಲ್ಯಾಣ ಮಂಟಪದಲ್ಲಿ ಭಾರತೀಯ ಜ್ಯೋತಿರ್ವಿಜ್ಞ್ಞಾನ ಸಂಶೋಧನಾ ಕೇಂದ್ರ ವತಿಯಿಂದ ಬುಧವಾರ ಆಯೋಜಿಸಿದ್ದ 2024-24ನೇ ಶೈಕ್ಷಣಿಕ ವರ್ಷದ ಜ್ಯೋತಿಶಾಸ್ತ್ರ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜ್ಯೋತಿಷ ಶಾಸ್ತ್ರ ಬೌದ್ಧ, ಜೈನ ಧರ್ಮ ಹಾಗೂ ವೈದಿಕ ಧರ್ಮಗಳಲ್ಲೂ ಇದೆ. ಇಲ್ಲಿರುವ ವಿದ್ಯೆಯನ್ನು ಕ್ರಮಬದ್ಧವಾಗಿ ತಿಳಿದು ಹೇಳಿದರೆ ಲೋಕಕ್ಕೆ ಉಪಕಾರ ಆಗುತ್ತದೆ ಎಂದು ಹೇಳಿದರು.

ಜ್ಯೋತಿಶಾಸ್ತ್ರ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಪ್ರಮಾಣ ಪತ್ರ ಪ್ರದಾನ ಮಾಡಿದರು. ಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಆರಾಧ್ಯ ಮಹಾ ಸಭಾದ ಅಧ್ಯಕ್ಷ ಪಿ.ನಾಗಭೂಷಣಾರಾಧ್ಯ, ಸಂಸ್ಥೆಯ ಅಧ್ಯಕ್ಷ ಕೆ.ಜಿ.ಪುಟ್ಟಹೊನ್ನಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net