

ಚಿತ್ರದುರ್ಗ: ತಾಲೂಕಿನ ದೊಡ್ಡಸಿದ್ಧವ್ವನಹಳ್ಳಿಯ ಜ್ಞಾನಪೂರ್ಣ ಶಾಲೆಯ ಆವರಣದಲ್ಲಿ ಶುಕ್ರವಾರ ಚಿಣ್ಣರಿಗಾಗಿ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.
ವಿದ್ಯಾದೇವತೆ ಶಾರದಾ ಮಾತೆಗೆ ಪೂಜೆ ನೆರವೇರಿದ ಬಳಿಕ ಪಾಲಕರೊಂದಿಗೆ ಕುಳಿತ ಮಕ್ಕಳು ಅಕ್ಷರಾಭ್ಯಾಸಕ್ಕೆ ಮುಂದಾದರು.
ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ಕಾರ್ಯದರ್ಶಿ ಸುಹಾಸಿನಿ ವೆಂಕಟೇಶ್ ರೆಡ್ಡಿ, ಶಾಲೆಯ ಆಡಳಿತಾಧಿಕಾರಿ ಡಾ.ಕೆ.ಎನ್. ಸ್ವಾಮಿ, ಪ್ರಾಚಾರ್ಯೆ ವಿಜಯಾಶ್ರೀ, ಮುಖ್ಯ ಶಿಕ್ಷಕರು, ಶಿಕ್ಷಕ-ಶಿಕ್ಷಕಿಯರು ಇತರರಿದ್ದರು.