ಜ್ಞಾನ ಬದುಕಿನ ದೊಡ್ಡ ಸಂಪತ್ತು

interact klub
ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚೈತನ್ಯ ಇಂಟರ‌್ಯಾಕ್ಟ್ ಕ್ಲಬ್‌ನ್ನು ರೋಟರಿ ಸಂಸ್ಥೆ ಅಧ್ಯಕ್ಷ ಕಿರಣ್ ಉದ್ಘಾಟಿಸಿದರು. ವಿದ್ಯಾನಂದಕುಮಾರ್, ರಾಜೇಶ್ , ಎನ್.ಟಿ. ಶೇಷಾಚಲ, ಕೆ.ಎಸ್.ರಾಜಕುಮಾರ್ ಇತರರಿದ್ದರು.
Published on

ಎನ್.ಆರ್.ಪುರ: ಜ್ಞಾನವೇ ಬದುಕಿನ ದೊಡ್ಡ ಸಂಪತ್ತು. ಸೇವೆಯ ಮೂಲಕವೂ ಜ್ಞಾನ ಸಂಪಾದಿಸಿಕೊಳ್ಳಬಹುದು ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ತಿಳಿಸಿದರು.

ಅವರು ಶನಿವಾರ ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಚೈತನ್ಯ ಇಂಟರ‌್ಯಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಜಗತ್ತು ಹಲವು ಸಂಕಷ್ಟಕ್ಕೊಳಗಾಗುತ್ತಿದೆ. ನೆಲ, ಜಲ, ಸಂಸ್ಕೃತಿ ಕಾಪಾಡಬೇಕಾದ ಮಾನವನಿಂದಲೇ ಭೂಮಿಯ ಮೇಲೆ ದುಷ್ಕೃತ್ಯಗಳು ನಡೆಯುತ್ತಿವೆೆ ಎಂದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿದ್ಯಾನಂದಕುಮಾರ್ ಮಾತನಾಡಿ, ರೋಟರಿ ಕ್ಲಬ್ ಪ್ರಾಯೋಜಿಸುತ್ತಿರುವ ಇಂಟರ‌್ಯಾಕ್ಟ್ ಕ್ಲಬ್‌ನ ಸದಸ್ಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಟ್ಟಿನಮನೆ ಶಿಕ್ಷಣ ತಜ್ಞ ಶಂಕರನಾರಾಯಣ ಮಾತನಾಡಿ, ಕಟ್ಟಿನಮನೆ ಪ್ರೌಢಶಾಲೆ ಉತ್ತಮ ಲಿತಾಂಶ ಪಡೆಯುತ್ತಿದ್ದು ಸರ್ಕಾರದ ಅನದಾನದಿಂದ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ 8,9 ಹಾಗೂ 10ನೇ ತರಗತಿ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಿದರು. ಇಂಟರ‌್ಯಾಕ್ಟ್ ಕ್ಲಬ್ ಅಧ್ಟಕ್ಷರಾಗಿ ಯಶವಂತ್, ಕಾರ್ಯದರ್ಶಿಯಾಗಿ ಶ್ರುತಿ ಆಯ್ಕೆಯಾದರು.
ಸಭೆಯಲ್ಲಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಎನ್.ಟಿ. ಶೇಷಾಚಲ, ಮಾಜಿ ಕಾರ್ಯದರ್ಶಿ ಕೆ.ಎಸ್.ರಾಜಕುಮಾರ್, ಇಂಟರ‌್ಯಾಕ್ಟ್ ಕ್ಲಬ್ ನಿರ್ದೇಶಕ ವಿಜಯ್, ಕಟ್ಟಿನಮನೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net