ಜಾತಿ ಗಣತಿ ತುರ್ತು ಅಗತ್ಯವಿದೆ

DR HC MAHADEVAPPA (1)
Published on

ಚಿತ್ರದುರ್ಗ: ಭಾರತ್ ಜೋಡೋ ಯಾತ್ರೆಯಲ್ಲಿ ಹರ್ಬಲ್ ನಕ್ಸಲರು ಬಂದಿದ್ದರು ಎಂಬುದಕ್ಕೆ ಆರೋಪಿಸುವವರ ಬಳಿ ಸಾಕ್ಷಿ ಇದೆಯೇ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂತರಾಜ್ ವರದಿ ಸರ್ಕಾರ ಸ್ವೀಕರಿಸಿದ ನಂತರ ಸಚಿವ ಸಂಪುಟ ಸಭೆ ನಡೆಸಿ, ಆ ನಂತರವೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ಟಿಪ್ಪು ದೇವದಾಸಿ ಪದ್ಧತಿ ವಿರೋಧಿಸಿದರು. ಸಿರಿಧಾನ್ಯ ಪರಿಚಯಿಸಿದರು. ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಎಲ್ಲದಕ್ಕಿಂತ ಹೆಚ್ಚಾಗಿ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ಉತ್ತಮ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲವೇ? ಬೇಕಾದವರನ್ನು ಬೆಂಬಲಿಸುವುದು, ಬೇಡದವರನ್ನು ವಿರೋಧಿಸುವುದೇ ಬಿಜೆಪಿಗರ ಕೆಲಸ ಎಂದು ವಿಮಾನ ನಿಲ್ದಾಣವೊಂದಕ್ಕೆ ಟಿಪ್ಪು ಹೆಸರಿಡಲು ವಿರೋಧಿಸುವವರ ವಿರುದ್ದ ಈ ರೀತಿ ಪ್ರತಿಕ್ರಿಯಿಸಿದರು.

ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು. ಉದ್ಯೋಗ, ಶಿಕ್ಷಣ ಪ್ರತಿ ಪ್ರಜೆಗೂ ಸಿಗಬೇಕು. ಅದಕ್ಕಾಗಿ ಜಾತಿ ಗಣತಿ ಆಗಬೇಕಿದೆ, ಇದರಿಂದ ಎಲ್ಲವೂ ತಿಳಿಯಲಿದೆ ಎಂದರು.

ಶೋಷಿತ ಸಮುದಾಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿವೆ. ಪ್ರತ್ಯೇಕ ಸಭೆ ಮಾಡಲು ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ. ಇದಕ್ಕಾಗಿ ಪದೇ ಪದೆ ಸಿಎಂ ಶಕ್ತಿ ಪ್ರದರ್ಶನ ಮಾಡಬೇಕೆ. ರಾಜ್ಯದಲ್ಲಿ ಮಾಸ್ ಲೀಡರ್ ಆಗಿದ್ದು, ಅವರ ನಾಯಕತ್ವ ಎಲ್ಲ ಜಾತಿ, ಧರ್ಮದವರು ಒಪ್ಪಿಕೊಂಡಿದ್ದಾರೆ. ಮುಖಂಡ ಲೆಹರ್ ಸಿಂಗ್ ಆರೋಪ ಆಧಾರ ರಹಿತ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net