ಜೈನ ಸಮುದಾಯದಿಂದ ಮಹಾವೀರ ತೀರ್ಥಂಕರರ ಜಯಂತಿ

15
Published on

ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಜಯಂತಿಯನ್ನು ಜೈನ ಸಮುದಾಯದವರು ಗುರುವಾರ ಅದ್ದೂರಿಯಾಗಿ ಆಚರಿಸಿದರು.

ಜಯಂತಿ ಪ್ರಯುಕ್ತ ತಮ್ಮ ವ್ಯಾಪಾರ ವಹಿವಾಟಿಗೆ ರಜೆ ಘೋಷಿಸಿದ ಜೈನರು ದಿನವಿಡೀ ನಡೆದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತ್ಯಾಗ, ವೈರಾಗ್ಯ ಮೂರ್ತಿಯನ್ನು ಸ್ಮರಿಸಿದರು.

ಬೆಳಗ್ಗೆ ಧ್ವಜಾರೋಹಣ ನಂತರ ಮಹಾವೀರಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ, ಅಭಿಷೇಕ, ಮಂಗಳಾರತಿ ನೆರವೇರಿತು. ಬಳಿಕ ನಡೆದ ಮೆರವಣಿಗೆಯಲ್ಲಿ ನೂರಾರು ಜೈನ ಸಮುದಾಯದವರು ಭಾಗಿಯಾದರು. ಮಹಿಳೆಯರು ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net