ಜೇನುಹುಳು ದಾಳಿಗೆ ಹೆದರಿ ಬಾವಿಗೆ ಜಿಗಿದಾತ ಮೃತ್ಯು

boy death
Published on

ರಾಮದುರ್ಗ: ಮರ ಕಡಿಯುವ ಸಂದರ್ಭದಲ್ಲಿ ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಬಲಿಯಾದ ಘಟನೆ ತಾಲೂಕಿನ ಚೆನ್ನಾಪುರ ಗ್ರಾಮದ ತೋಟದಲ್ಲಿ ಬುಧವಾರ ನಡೆದಿದೆ. ಬಾಗಲಕೋಟೆ ಜಿಲ್ಲೆ ಲೋಕಾಪುರ ಗ್ರಾಮದ ನಿವಾಸಿ ಶರೀಫ್ ಮೈಬುಸಾಬ ಅತ್ತಾರ (47) ಮತ. ಮರ ಕಡಿಯುತ್ತಿದ್ದಾಗ ಹೆಜ್ಜೇನು ಕಾಣಿಸಿದೆ.

ಅದನ್ನು ಬಿಡಿಸಲು ಮುಂದಾದ ಸಂದರ್ಭದಲ್ಲಿ ಜೇನು ಹುಳುಗಳು ದಾಳಿ ಮಾಡಿವೆ. ಇವುಗಳಿಂದ ರಕ್ಷಿಸಿಕೊಳ್ಳಲು ಮರದಿಂದ ಕೆಳಗೆ ಜಿಗಿದು ಬಾವಿಗೆ ಹಾರಿ ಅಸುನೀಗಿದ್ದಾನೆ. ಇತರರು ಓಡಿ ಹೋಗಿದ್ದಾರೆ. ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮತದೇಹ ಹೊರತೆಗೆದಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net