ಜೆಇಇ ಲಿತಾಂಶದಲ್ಲಿ ರಾಜ್ಯಕ್ಕೆ ಪ್ರಣವ್ ಟಾಪರ್

JEE_Advanced_2020_Result_Toppers
Published on


ಬೆಂಗಳೂರು
ಜೆಇಇ(ಅಡ್ವಾನ್ಸ್) ಪರೀಕ್ಷೆಯ ಲಿತಾಂಶ ಸೋಮವಾರ ಪ್ರಕಟವಾಗಿದ್ದು, ಎ್ಐಐಟಿಜೆಇಇ ಸಂಸ್ಥೆಯಿಂದ ತರಬೇತಿ ಪಡೆದ ಪ್ರಣವ್ ಸಿಂಘಾಲ್ ಅಖಿಲ ಭಾರತೀಯ ಮಟ್ಟದಲ್ಲಿ 103ನೇ ರ‌್ಯಾಂಕ್ ಪಡೆಯುವ ಮೂಲಕ ರಾಜ್ಯದ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ.
ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿ ಟಿ.ಚರ್ತುವೇದಿ 149ನೇ ರ‌್ಯಾಂಕ್, ಎ್ಐಐಟಿಜೆಇಇ ಸಂಸ್ಥೆಯ ತರಬೇತಿ ಪಡೆದ ಗೋವಿಂದ್ ಸಾಜು-269, ಕಲ್ಪ್ ಸಚಿನ್ ವ್ಯಾಸ್- 289,
ಬೆಂ.ಉತ್ತರ ವಲಯದ ನಾರಾಯಣ ಐಐಟಿ ಅಕಾಡೆಮಿ ವಿದ್ಯಾರ್ಥಿಗಳಾದ ಶಶೀಧರ್ ಜಿ.ಹೆಗಡೆ- 439ನೇ ರ‌್ಯಾಂಕ್, ಎಂ.ಡಿ.ರಿಜ್ವಾನ್ ಾರೂಕ್- 470, ಎ.ಗೌರವ್ -775ನೇ ರ‌್ಯಾಂಕ್ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಪ್ರಣವ್ ಸಿಂಘಾಲ್, ನಾನು ಎ್ಐಐಟಿಜೆಇಇ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಕನಸನ್ನು ಈ ಸಂಸ್ಥೆ ನನಸು ಮಾಡಿದೆ. ಇಲ್ಲಿನ ತರಬೇತಿ ಮತ್ತು ಪಾಲಕರ ಪ್ರೋತ್ಸಾಹದಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಾಯಿತು ಎಂದಿದ್ದಾನೆ.
‘ಐಐಟಿಯಲ್ಲಿ ಪ್ರವೇಶ ಪಡೆಯುವುದು ನನ್ನ ಕನಸಾಗಿತ್ತು. ಅದು ನನಸಾಗಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ವ್ಯಾಸಂಗ ಮಾಡಲು ಅನುಕೂಲವಾಯಿತು. ಪ್ರತಿ ನಿತ್ಯ 12 ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದೆ’ ಎನ್ನುತ್ತಾನೆ 149ನೇ ರ‌್ಯಾಂಕ್ ಪಡೆದ ಟಿ.ಚರ್ತುವೇದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net