

ಜೀವನದಲ್ಲಿ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಸೂರಿನ ಜನತಾ ನಗರದ ನಿವಾಸಿ ಗಂಗಾಧರ್(50) ಮೃತರು. ನಗರದ ಸರಸ್ವತಿಪುರಂ ಈಜುಕೊಳದ ಬಳಿ ಗಂಗಾಧರ್ ಮದ್ಯಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರಸ್ವತಿಪುರಂ 14 ನೇ ಮೈನ್‌ನಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು ಗಂಗಾಧರ್ ಮಕ್ಕಳ ಓದು ಹಾಗೂ ಹಣಕಾಸು ವಿಚಾರವಾಗಿ ಮನನೊಂದಿದ್ದ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಮೃತರ ಪತ್ನಿ ದೂರು ನೀಡಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.