ಜೀತವಿಮುಕ್ತರಿಗೆ ಪುನರ್ವಸತಿ ಕಲ್ಪಿಸಿ

HUN-SEP-23-4(BONDED LABOURERS STRIKE)
ಹುಣಸೂರು ನಗರದ ತಾ.ಪಂ. ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ನಿಂಗರಾಜ ಮಲ್ಲಾಡಿ ಇದ್ದರು.
Published on


ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ


ಹುಣಸೂರು: ಜೀತದಿಂದ ಬಿಡುಗಡೆ ಹೊಂದಿರುವ ಜೀತವಿಮುಕ್ತರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ದಸಂಸ) ಸದಸ್ಯರು ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.


ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, 3 ವರ್ಷಗಳಿಂದ 23 ಜೀತಗಾರರನ್ನು ಗುರುತಿಸಿ ಉಪವಿಭಾಗಾಧಿಕಾರಿಯಿಂದ ಇವರನ್ನು ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಗೊಳಿಸಿ ವರ್ಷಗಳೇ ಕಳೆದರೂ ಸರ್ಕಾರದ ವತಿಯಿಂದ ಇವರಿಗೆ ಪುನರ್ವಸತಿ ಕಲ್ಪಿಸಲಾಗಿಲ್ಲ. ಇದರಿಂದ ಸಂಕಷ್ಟದ ಜೀವನ ಸಾಗಿಸುವ ಸ್ಥಿತಿ ಇದೆ. ಜೀತಗಾರಿಕೆಯಿಂಧ ಬಿಡುಗಡೆಗೊಂಡ ತಕ್ಷಣವೇ ಪುನರ್ವಸತಿ ಕಲ್ಪಿಸಬೇಕೆಂದು ಕಾನೂನುಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜೀತವಿಮುಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಈ ಕೂಡಲೇ ಸರ್ಕಾರದ ವತಿಯಿಂದ ಸಿಗಬೇಕಾದ ಸೌಲಭ್ಯಗಳನ್ನು ತಕ್ಷಣವೇ ಮಂಜೂರು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.


ಮನವಿ ಸ್ವೀಕರಿಸಿದ ತಾ.ಪಂ. ಜೀತವಿಮುಕ್ತರ ಪುನರ್ವಸತಿ ಅಧಿಕಾರಿ ನಟೇಶ್ ಮಾತನಾಡಿ, ಕೂಡಲೇ ಜೀತವಿಮುಕ್ತರ ಸಮಸ್ಯೆ ಕುರಿತು ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು. ಸರ್ಕಾರದ ವತಿಯಿಂದ 2 ವರ್ಷಗಳ ಅವಧಿಗೆ ಪ್ರತಿ ತಿಂಗಳು ಮಾಸಾಶನ ಬಿಡುಗಡೆಗೊಳಿಸಲಾಗುವುದು ಎಂದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net