

ಕೋಲಾರ: ಜಿಲ್ಲೆಯಲ್ಲಿ ಬಿ ಖಾತಾ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನಽಕೃತ ಆಸ್ತಿಗಳ ದಾಖಲೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ಇದಕ್ಕೆ ೯೦ ದಿನ ಮಾತ್ರ ಅವಕಾಶ ಇದೆ. ಅನಽಕೃತ , ಕಂದಾಯ ಬಡಾವಣೆಗಳಿಗೆ ಬಿ-ಖಾತಾ ನೀಡಲು ಅಭಿಯಾನ ಪ್ರಾರಂಭಿಸಲು ಜಿಲ್ಲಾಽಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಯೋಜನಾ ಅಽಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದರು.
ಜಿಲ್ಲೆಯ 3 ನಗರಸಭೆ, 3 ಪುರಸಭೆ ಹಾಗೂ 1 ಪಟ್ಟಣ ಪಂಚಾಯಿತಿ ಸ್ಥಳೀಯ ಸಂಸ್ಥೆಗಳಿವೆ. ಜಿಲ್ಲೆಯಲ್ಲಿ ಅನಽಕೃತ 1,46,687 ಆಸ್ತಿಗಳಿದ್ದು, ಆ ಪೈಕಿ 57,000 ನಿವೇಶನ, 13,712 ವಾಣಿಜ್ಯ ಕಟ್ಟಡಗಳು, ಇತರೆ 33,301 ಆಸ್ತಿ ಇವೆ. ಜಿಲ್ಲಾಧಿಕಾರಿ ಅನುಮೋದನೆ, ಕೆಯುಡಿಎ ಅನುಮೋದನೆ ಇಲ್ಲದೆ ಬಡಾವಣೆ ನಿರ್ಮಾಣ ಮಾಡಲಾಗಿದೆ. ಕೆಲವರು ಕಂದಾಯ ಭೂಮಿಯನ್ನು ಗುಂಟೆಗಳ ಲೆಕ್ಕದಲ್ಲಿ ಮಾರಾಟ ಮಾಡಿದ್ದು, ಅವುಗಳಿಗೆ ದಾಖಲೆಗಳು ಇರಲಿಲ್ಲ. ಇದೀಗ ಇರುವ ಅನಽಕೃತ ಆಸ್ತಿಗಳಿಗೆ ಬಿ ಖಾತಾ ನೀಡಿ ನೀಡಲಾಗುವುದು ಎಂದರು.
ಬಿ ಖಾತಾ ದಾಖಲೆ ನೀಡಲು ೨೦೨೪-೨೫ ಸಾಲಿನಲ್ಲಿ ದುಪ್ಪಟ್ಟು ತೆರಿಗೆ ಕಟ್ಟಿಸಿಕೊಳ್ಳಲಾಗುವುದು. ಆನಂತರ ಪ್ರತಿ ವರ್ಷವು ನಿಯಮದ ಪ್ರಕಾರ ತೆರಿಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಾದ ನಂತರ ಯಾರಾದರು ಅನಽಕೃತ ಆಸ್ತಿ ಮಾಡಿಕೊಂಡರೆ ಅದಕ್ಕೆ ಅಽಕಾರಿಗಳೇ ನೇರ ಹೊಣೆ ಎಂದು ತಿಳಿಸಿದರು.
ಅನಧಿಕೃತ ಬಡಾವಣೆಗಳಿಂದ ಆದಾಯ ಬರುತ್ತಿಲ್ಲ, ಇದರ ಪರಿಣಾಮ ಜನರಿಗೆ ಸವಲತ್ತುಗಳೂ ಸಿಗುತ್ತಿಲ್ಲ, ಇವೆಲ್ಲಾ ಅನಾನುಕೂಲಗಳಿಗೂ ಕಾರಣವಾಗಿತ್ತು. ಕಂದಾಯ ಕಟ್ಟದಿರುವುದರಿಂದ ಸಮಸ್ಯೆಗಳಾಗುತ್ತಿದ್ದವು. ಇದೊಂದು ಬಾರಿ ಬಿ ಖಾತಾ ಕೊಟ್ಟು ಅಂತ್ಯ ಹಾಡಲು ಕ್ರಮವಹಿಸಲಾಗಿದೆ. ಇದಕ್ಕೆ 90 ದಿನ ಅಭಿಯಾನ ಹಮ್ಮಿಕೊಂಡಿದ್ದು, ಆಯ್ದ ಸ್ಥಳಗಳಲ್ಲಿ ಕ್ಯಾಂಪ್ ಹಾಕಿ ಗುರಿ ಸಾಧನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಬಾಕ್ಸ್...
* ದಲ್ಲಾಳಿಗಳನ್ನು ನಂಬಬೇಡಿ
ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ದಾಖಲೆ ಮಾಡಿಸಲು ದಲ್ಲಾಳಿಗಳ ಹಾವಳಿ ಹೆಚ್ಚಾಗಿತ್ತು, ಬಿ ಖಾತಾ ಮಾಡಿಸಲು ಸರ್ಕಾರ ಅವಕಾಶ ನೀಡಿದಾದ ಮೇಲೆಯೂ ಸ್ಥಳೀಯವಾಗಿ ದಲ್ಲಾಳಿಗಳೇ ಮನೆಗಳ ಬಳಿ ಹೋಗಿ ಆಸೆ ಹುಟ್ಟಿಸಬಹುದು. ಯಾರು ಸಹ ದಲ್ಲಾಳಿಗಳನ್ನು ನಂಬಬಾರದು, ಅಽಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ಬಿ ಖಾತಾ ನೀಡುತ್ತಾರೆ, ಇದಕ್ಕೆ ಸಾರ್ವಜನಿಕರು ಅಸ್ತಿ ಸಂಬಂಧ ಪೂರಕ ದಾಖಲೆಗಳನ್ನು ಒದಗಿಸಬೇಕು ಎಂದು ಡಿಸಿ ಡಾ.ಎಂ.ಆರ್.ರವಿ ಹೇಳಿದರು.