ವಿಜಯವಾಣಿ ಸುದ್ದಿಜಾಲ ಕೋಲಾರ
ರಾಷ್ಟಿçÃಯ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಹಕಾರ ಸಚಿವ ರಾಜಣ್ಣ ಮತ್ತು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ರವರ ಮಾರ್ಗದರ್ಶನದಲ್ಲಿ ಕೋಲಾರ ಶಾಸಕರಾದ ಕೊತ್ತೂರು ಮಂಜುನಾಥ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮತ್ತು ಎಂ.ಎಲ್.ಸಿ ಅನಿಲ್‌ಕುಮಾರ್ ಹಾಗೂ ಜಿಲ್ಲೆಯ ಕಾಂಗ್ರೇಸ್ ಶಾಸಕರ ಮತ್ತು ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಿಂದ ೩ನೇ ಅವಧಿಗೆ ಕೋಮುಲ್ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಆಗಿದ್ದೇನೆಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಶನಿವಾರ ಕೋಮುಲ್ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆದ ನಂಜೇಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಕೋಚಿಮುಲ್ ವಿಭಜನೆಯಾದ ನಂತರ ಒಕ್ಕೂಟದ ಅಧ್ಯಕ್ಷನಾಗಲು ಅವಕಾಶ ಸಿಕ್ಕಿದೆ. ಇದಕ್ಕೆ ಕಾಂಗ್ರೇಸ್ ನಾಯಕರ ಆಶೀರ್ವಾದವೂ ಕಾರಣವಾಗಿದೆ. ಮೊದಲು ೨ ಬಾರಿ ಅಧ್ಯಕ್ಷನಾಗಿ ಆಯ್ಕೆ ಆಗಲು ಎರಡೂ ಜಿಲ್ಲೆಯ ನಾಯಕರ ಸಹಕಾರ ನೀಡಿದ್ದರು. ನಂಬಿಕೆ ಉಳಿಸಿಕೊಂಡು ಆಡಳಿತ ಕೊಡುವ ಗುರಿ ನನದಾಗಿದೆ ಎಂದರು.
ಕಳೆದ ಅವಧಿಯಲ್ಲಿ ಐದು ವರ್ಷ ನಡೆಸಿದ ಅಧಿಕಾರದಲ್ಲಿ ಅನೇಕ ಕಾರ್ಯಕ್ರಮ ಜಾರಿಗೆ ತರಲಾಗಿದೆ. ನಮ್ಮ ಆಡಳಿತ ಕೊನೆ ಅವಧಿಯಲ್ಲಿ ಒಕ್ಕೂಟದಲ್ಲಿ ೬ ಲಕ್ಷ ೮೫ ಸಾವಿರ ಲೀಟರ್ ಹಾಲು ಇತ್ತು, ಆಡಳಿತಾಧಿಕಾರಿ ಬಂದ ನಂತರ ೯೦೦೦ ಲಕ್ಷಕ್ಕೆ ಲೀಟರ್‌ಗೆ ಏರಿಕೆ ಆಗಿದೆ. ಹಾಲಿನ ಸಂಘಗಳು ಹೆಚ್ಚಿಗೆ ಆಗಿವೆ. ರಾಜ್ಯದಲ್ಲಿ ೧.೨೮ ಲಕ್ಷ ಉತ್ಪಾದನೆ ದಾಟಿದೆ. ಹಾಲಿನ ಪ್ರೋತ್ಸಾಹ ಧನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ೪ ರೂ.ಗಳನ್ನು ಹೆಚ್ಚಿಗೆ ಮಾಡಿದ ಕಾರಣ ರಾಜ್ಯದಲ್ಲಿ ಹಾಲು ಹೆಚ್ಚಾಗಲು ಕಾರಣವಾಗಿದೆ ಎಂದರು.
ಮುಂದಿನ ಗುರಿ :
ಒಂದು ವರ್ಷದೊಳಗೆ ಕೋಲಾರ ಜಿಲ್ಲೆಯಲ್ಲಿ ೧೦ ಲಕ್ಷ ಹಾಲು ಉತ್ಪಾದನೆ ಗುರಿ ಇದೆ. ಇದಕ್ಕೆ ಅಗತ್ಯ ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ೧೦೦ಕ್ಕೂ ಹೆಚ್ಚು ಸಂಘಗಳನ್ನು ರಚನೆ ಮಾಡಲಾಗುವುದು. ಉತ್ಪಾದಕರಿಗೆ ಒಳ್ಳೆ ದರ ಕೊಡಬೇಕಾದ ಜವಾಬ್ದಾರಿ ಇದೆ. ೧.೫೦ ಲಕ್ಷ ಲೀಟರ್ ಹೆಚ್ಚಿಗೆ ಹಾಲು ಬರುತ್ತಿದ್ದು, ಇದರ ಮಾರಾಟಕ್ಕೆ ಕ್ರಮ ಮತ್ತು ಹಾಲಿನ ಉತ್ಪನ್ನಗಳ ವಸ್ತುಗಳನ್ನು ತಯಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಪ್ರತಿ ಹಾಲಿನ ಸಂಘದಲ್ಲಿ ಎನ್.ಡಿ.ಡಿ.ಬಿ. ಸಹಕಾರದಿಂದ ಕಾಮನ್ ಸಾಫ್ಟ್ವೇರ್ ಅಳವಡಿಸಲಾಗುವುದು. ಇದರಿಂದ ಒಳ್ಳೆಯ ಗುಣಮಟ್ಟದ ಹಾಲಿಗೆ ಹೆಚ್ಚಿನ ದರ ನಿಗಧಿಪಡಿಸಲಾಗುವುದು ಎಂದರು.
ಕಳೆದ ಆಡಳಿತ ಮಂಡಳಿ :
ಕಳೆದ ಆಡಳಿತ ಮಂಡಳಿಯಲ್ಲಿ ಹಳೇ ಕಟ್ಟಡ ನಿರ್ಮಾಣ ಮಾಡಲು ಕ್ರಮವಹಿಸಿದ್ದು, ೨೫೦ ಕೋಟಿ ವೆಚ್ಚದಲ್ಲಿ ನೂತನ ಎಂ.ವಿ.ಕೆ. ಗೋಲ್ಡನ್ ಡೈರಿ ನಿರ್ಮಾಣವಾಗುತ್ತಿದೆ. ಡಿಸೆಂಬರ್ ೨೦೨೫ ರೊಳಗೆ ಉದ್ಘಾಟನೆ ಮಾಡಲಾಗುವುದು. ಇದರಿಂದ ವರ್ಷಕ್ಕೆ ೩ ಕೋಟಿ ಸಂಸ್ಥೆಗೆ ಉಳಿತಾಯವಾಗಲಿದೆ. ಎಂ.ವಿ.ಕೆ.ಮೆಗಾ ಡೈರಿಯ ಪಕ್ಕದಲ್ಲಿ ಇರುವ ಖಾಲಿ ಜಾಗದಲ್ಲಿ ನೂತನ ಮಾದರಿಯ ಘಟಕ ನಿರ್ಮಾಣ ಮಾಡುವ ಗುರಿ ಇದೆ ಎಂದರು.
ಸೋಲಾರ್ ಘಟಕ :
ಇಡೀ ದೇಶದಲ್ಲಿ ಒಕ್ಕೂಟದ ವತಿಯಿಂದ ೧೨ ಮೆಗಾ ವ್ಯಾಟ್ ಉತ್ಪಾದನ ಸೋಲಾರ್ ಘಟಕವನ್ನು ಪ್ರಾರಂಭಿಸಲಾಗುತ್ತದೆ. ಈಗಾಗಲೇ ೧೦ ಮೆಗಾ ವ್ಯಾಟ್ ಪವರ್‌ನ್ನು ಬಳಸಿಕೊಳ್ಳಲಾಗುತ್ತಿದೆ. ಇನ್ನು ೨ ಮೆಗಾ ವ್ಯಾಟನ್ನು ಪವರ್‌ನ್ನು ಆಗಸ್ಟ್ ಒಳಗಾಗಿ ಬಳಸಿಕೊಳ್ಳಲಾಗುವುದು. ಪ್ರತಿದಿನ ವಿದ್ಯುತ್‌ಗಾಗಿ ೪೮ ಸಾವಿರ ವೆಚ್ಚ ತಗುಲುತ್ತಿದ್ದು, ನಮ್ಮ ಸೋಲಾರ್ ಘಟಕದಿಂದ ೧೪ ಲಕ್ಷ ವೆಚ್ಚದ ವಿದ್ಯುತ್ ಸಿಗಲಿದ್ದು, ಮುಂದಿನ ದಿನಗಳಲ್ಲಿ ಬಿ.ಎಂ.ಸಿ.ಗಳಿಗೂ ಸೋಲಾರ್ ಪವರ್‌ನ್ನು ಸರಬರಾಜು ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು ೨೪೦ ಬಿಎಂಸಿಗಳು ಕಾರ್ಯನಿರ್ವಹಿಸುತ್ತಿವೆ. ೩ ಲಕ್ಷ ಯೂನಿಟ್ ಪವರ್ ಪ್ರತಿ ದಿನ ಬೇಕು. ಒಂದು ಲೀಟರ್ ನಿರ್ವಹಣೆಗೆ ಬಿ.ಎಂ.ಸಿ.ಗಳಿಗೆ ೩೮ ಪೈಸೆ ನೀಡಲಾಗುತ್ತಿದ್ದು, ನಮ್ಮಿಂದ ಸೋಲಾರ್ ಪವರ್ ನೀಡಿ, ಬಿ.ಎಂ.ಸಿ.ಗಳಿಗೆ ನಿರ್ವಹಣೆಗೆ ನೀಡುತ್ತಿದ್ದ ಹಣ ಕಡಿತ ಮಾಡಿದರೆ ಒಕ್ಕೂಟಕ್ಕೆ ಹಣ ಉಳಿಯುತ್ತದೆ ಎಂದರು.
ಕೆ.ಎಂ.ಎಫ್.ಅಧ್ಯಕ್ಷನಾಗುವ ಆಸೆಯೂ ಇದೆ :
ಕೆಎಂಎಫ್ ಗೆ ಹೋಗಲು ಬೇಡಿಕೆ ಇಟ್ಟಿದ್ದೇನೆ. ಅಲ್ಲಿ ಅಧ್ಯಕ್ಷರಾಗುವ ಅಸೆಯೂ ಇದೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರು ಹಿರಿಯ ಶಾಸಕರು. ಅವರು ಕೆಎಂಎಫ್ ಗೆ ಹೋಗೊ ವಿಚಾರ ನನಗೆ ಗೊತ್ತಿಲ್ಲ. ಎಸ್.ಎನ್.ನಾರಾಯಣಸ್ವಾಮಿ ಮತ್ತು ಶಾಸಕಿ ರೂಪಕಲಾ ಅವರಿಗೆ ಸಚಿವ ಸಂಪುಟ ಅಧಿಕಾರ ಸಿಕ್ಕಿದೆ. ನಾನು ಕೋಮುಲ್ ಅಧ್ಯಕ್ಷನಾಗಲು ೮ ಮಂದಿ ನಿರ್ದೇಶಕರ ಬೆಂಬಲ ಸಿಕ್ಕಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಮತ್ತೊಬ್ಬ ಮಹಿಳಾ ನಿರ್ದೇಶಕಿ ಮಹಾಲಕ್ಷಿö್ಮÃ ಪ್ರಸಾದ್‌ಬಾಬು ಗೈರ ಹಾಜರಿ ಬಗ್ಗೆ ಉತ್ತರಿಸಿದ ನಂಜೇಗೌಡ ಅವರು ಬೇರೆ ಕೆಲಸದ ಮೇಲೆ ಹೋಗಿದ್ದಾರೆನೋ ಗೊತ್ತಿಲ್ಲ ಎಂದರು.
ಕೋಲಾರ ಹಾಲು ಒಕ್ಕೂಟಕ್ಕೆ ಇತಿಹಾಸ ಇದೆ. ಇದನ್ನು ನೆನಪು ಮಾಡುಕೊಂಡು ಎಲ್ಲರೂ ಸಹಕಾರ ನೀಡಬೇಕು. ರಾಜಕಾರಣ ಮಾಡುವುದಕ್ಕೆ ಬೇರೆ ಕಡೆ ಅವಕಾಶ ಇದೆ ಎಂದರು.
ತನಿಖೆಯನ್ನು ಸ್ವಾಗತಿಸುತ್ತೇನೆ :
ಈ ಹಿಂದೆ ಕೋಚಿಮುಲ್‌ನಲ್ಲಿ ಹಗರಣ ಮಾಡಿದ್ದರೆ ೩ನೇ ಅವಧಿಗೆ ನನ್ನನ್ನು ನಿರ್ದೇಶಕರು ಮತ್ತು ಮುಖಂಡರು ಅಧ್ಯಕ್ಷನನ್ನಾಗಿ ಮಾಡುತ್ತಿರಲಿಲ್ಲ. ಎಸ್.ಎನ್.ನಾರಾಯಣಸ್ವಾಮಿಯವರು ಸದನದಲ್ಲಿ ಧ್ವನಿ ಎತ್ತಿರುವುದಕ್ಕೆ ಉತ್ತರ ಸಿಕ್ಕಿದೆ. ಅವರು ತನಿಖೆ ನಡೆಯುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ತನಿಖೆಗೆ ಸ್ವಾಗತಿಸುತ್ತೇನೆ. ಕೋಚಿಮುಲ್ ಸಾಮಾನ್ಯ ಸಭೆಗೆ ಹಾಲು ಡೈರಿಗಳ ಅಧ್ಯಕ್ಷರು ಬರುವುದು ನಾನು ಭ್ರಷ್ಟಾಚಾರ ಮಾಡಿದ್ದರೆ ನನ್ನನ್ನು ಸಭೆಗಳಲ್ಲಿ ವೇದಿಕೆಯ ಹತ್ತಿರಕ್ಕೆ ಬರಿಸುತ್ತಿರಲಿಲ್ಲ. ಮುಖ್ಯಮಂತ್ರಿಗಳು ಹೇಳಿರುವುದು ಯಾರಿಗೆ ಬೆಂಬಲ ಇದೆಯೋ ಅದರ ಪ್ರಕಾರ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳಿದ್ದರು. ಅದರ ಪ್ರಕಾರ ನಾನು ಅಧ್ಯಕ್ಷನೇ ಅಗಿದ್ದೇನೆ. ನಾನು ಎಸ್.ಎನ್. ಕುಳಿತು ಮಾತನಾಡಿಲ್ಲ. ಕರೆದರೆ ಮಾತನಾಡುತ್ತೇನೆ. ಹೇಳಿದ್ದನ್ನು ಕೇಳುತ್ತೇನೆ ಎಂದರು.
ಮೇಲುಗೈ ಕೆಳಗೈ ಇಲ್ಲ :
ಕೋಚಿಮುಲ್ ವಿಭಜನೆ ಆಗಿ ಕೋಮುಲ್ ಆದ ನಂತರ ಪ್ರಥಮ ಅಧ್ಯಕ್ಷರಾಗಿ ನಂಜೇಗೌಡ ಆಯ್ಕೆ ಆಗಿದ್ದಾರೆ. ಸಂಸ್ಥೆಯನ್ನು ಅಭಿವೃದ್ದಿಪಡಿಸುವ ವಿಚಾರಕ್ಕೆ ಸದಾ ನನ್ನ ಬೆಂಬಲ ಇರುತ್ತದೆ. ಎಸ್.ಎನ್.ನಾರಾಯಣಸ್ವಾಮಿ ಗೈರು ಹಾಜರಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಜಿಲ್ಲೆಯ ಹಿರಿಯರಾದ ರಮೇಶ್‌ಕುಮಾರ್ ರವರ ನಿರ್ದೇಶನಗಳ ಮೇರೆಗೆ ಬಂದಿದ್ದೇನೆ ಎಂದರು.
ದೇಶದಲ್ಲಿ ನಾನೊಬ್ಬನೇ ಅಲೆಮಾರಿ ಶಾಸಕ :
ಭಾರತದ ದೇಶದಲ್ಲಿ ಅಲೆಮಾರಿ ಶಾಸಕ ನಾನೊಬ್ಬನೆ. ಎರಡು ಭಾರಿ ಶಾಸಕನಾಗಿ ಸಚಿವ ಸ್ಥಾಬದ ಅಕಾಂಕ್ಷೆಯಾಗಿದ್ದೆನೆ. ಏನು ಇಲ್ಲದವರು ನಾನೋಬನೇ ಆಗಿದ್ದೇನೆ. ನಾನು ಅಲೆದಾಡಿಕೊಂಡು ಇರಲು ತಯಾರಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಎಲ್.ಸಿ. ಅನಿಲ್‌ಕುಮಾರ್, ಕೋಮುಲ್ ನಿದೇರ್ಶಕರಾದ ಜಯಸಿಂಹ ಕೃಷ್ಣಪ್ಪ, ಎನ್.ಹನುಮೇಶ್, ಕೆ.ಕೆ.ಮಂಜುನಾಥ್, ರಮೇಶ್, ಕಾಂತಮ್ಮ, ಷಂಶೀರ್, ಶ್ರೀನಿವಾಸ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಸುನೀಲ್ ನಂಜೇಗೌಡ ಮುಂತಾದವರು ಇದ್ದರು.
ಚಿತ್ರ ೦೫ ಕೆ.ಎಲ್.ಆರ್. ೦೨ : ಹಾಲು ಒಕ್ಕೂಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್ ಮುಂತಾದವರು ಇದ್ದರು.