ಜಿಲ್ಲೆಯಲ್ಲಿ ರಕ್ತಕ್ಕೆ ಬೇಡಿಕೆ

25adarshkdga1
Published on

ಕೊಡಗು: ನಿರೀಕ್ಷಿತ ಮಟ್ಟದಲ್ಲಿ ನಡೆಯದ ರಕ್ತದಾನ ಶಿಬಿರ ಮತ್ತು ಡೆಂೆ ರೋಗಿಗಳ ಹೆಚ್ಚಳದಿಂದಾಗಿ ಜಿಲ್ಲೆಯ ರಕ್ತನಿಧಿ ಕೇಂದ್ರದಲ್ಲಿ ತಾತ್ಕಲಿಕವಾಗಿ ರಕ್ತದ ಕೊರತೆ ಉಂಟಾಗಿದೆ. ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ರಕ್ತಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದ್ದು, ಬೇಡಿಕೆ ಪೂರೈಸಲು ರಕ್ತನಿಧಿ ಕೇಂದ್ರ ಕ್ರಮ ಕೈಗೊಳ್ಳಬೇಕಿದೆ.

ಕೊಡಗಿಗೆ ಪ್ರತಿ ತಿಂಗಳು 500 ಯೂನಿಟ್ ರಕ್ತದ ಅವಶ್ಯಕತೆ ಇದೆ. ಪ್ರಸ್ತಕ ಸಾಲಿನಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ ಆಯೋಜಿಸುವುದಕ್ಕೆ ಸಂಘ-ಸಂಸ್ಥೆಗಳಿಗೆ ಸಾಧ್ಯವಾಗಲಿಲ್ಲ. ಇದರೊಂದಿಗೆ, ಈ ಬಾರಿ ಜಿಲ್ಲೆಯಲ್ಲಿ ಡೆಂೆ ಪ್ರಕರಣಗಳು ಹೆಚಾಗುತ್ತಿದ್ದು, ಪ್ಲೆಟ್‌ಲೆಟ್‌ಗಳಿಗೂ ಬೇಡಿಕೆ ಸೃಷ್ಟಿಯಾಗಿದೆ.

ಡೆಂಘೆ ರೋಗಿಗಳಿಗೆ ದಿನವೊಂದಕ್ಕೆ 150 ಎಂ.ಎಲ್ ನಿಂದ 200 ಎಂಎಲ್‌ನ ಪ್ಲೆಟ್‌ಲೆಟ್ ಅಗತ್ಯವಾಗಿದ್ದು, ಈ ಪ್ಲೆಟ್‌ಲೆಟ್ ಅನ್ನು 6 ಜನರ ರಕ್ತದಿಂದ ಬೇರ್ಪಡಿಸಿ ನೀಡಬೇಕಾಗಿರುವುದು ಕೂಡ ರಕ್ತ ಸಂಗ್ರಹಣೆ ಕಡಿಮೆಯಾಗಲು ಕಾರಣವಾಗಿದೆ. ಅಲ್ಲದೆ, ಪ್ಲೆಟ್‌ಲೆಟ್ ಅನ್ನು 5 ದಿನ ಮಾತ್ರ ಸಂಗ್ರಹಿಸಿಡಲು ಸಾಧ್ಯವಿರುವುದರಿಂದ ಬೇಡಿಕೆ ಸದ್ಯ ಹೆಚ್ಚಿದೆ.


ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ರಕ್ತನಿಧಿ ಕೇಂದ್ರದಿಂದ ಇಡೀ ಜಿಲ್ಲೆಗೆ ರಕ್ತ ಪೂರೈಕೆ ಆಗಬೇಕಿದೆ. ಗೋಣಿಕೊಪ್ಪಲು, ವಿರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರಗಳಲ್ಲಿ ರಕ್ತ ಶೇಖರಣಾ ಘಟಕಗಳು ಇದ್ದರೂ ರಕ್ತದ ಕೊರತೆ ಉಂಟಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಅಲ್ಲಿಗೂ ಜಿಲ್ಲಾ ಕೇಂದ್ರದಿಂದಲೇ ರಕ್ತ ಪೂರೈಸಬೇಕಿದೆ. ಖಾಸಗಿ ಆಸ್ಪತ್ರೆಗಳಿಗೂ ರಕ್ತ ಪೂರೈಕೆಯಾಗುತ್ತಿದ್ದು, ಸಹಜವಾಗಿಯೇ ಒತ್ತಡ ಹೆಚ್ಚಾಗಿದೆ.


ಅತ್ಯಾಧುನಿಕ ವೈದ್ಯಕೀಯ ಉಪಕರಣದ ಕೊರತೆ:ದೊಡ್ಡ ನಗರಗಳಲ್ಲಿ ಅಫೆರೆಸಿಸ್(ಚಿಠಿಡಿ) ಎಂಬ ಯಂತ್ರದ ಸಹಾಯದಿಂದ ಕೆಂಪು ರಕ್ತಕಣ, ಪ್ಲಾಸ್ಮ ಸೇರಿದಂತೆ ರಕ್ತದ ಬೇರೆ ಬೇರೆ ಕಣಗಳನ್ನು ಬೇರ್ಪಡಿಸುವ ಯಂತ್ರವೂ ಲಭ್ಯ. ಅಂದರೆ, ಒಬ್ಬ ದಾನಿಯ ರಕ್ತದಿಂದ ಅಗತ್ಯವಾದ ರಕ್ತದ ಘಟಕಗಳನ್ನು ಬೇರ್ಪಡಿಸುವ ಪ್ರಕ್ರಿಯೆ ಮತ್ತು ಸ್ವಯಂ ಚಾಲಿತ ಯಂತ್ರದ ಮೂಲಕ ದಾನಿಯ ದೇಹಕ್ಕೆ ಏಕಕಾಲದಲ್ಲಿ ಉಳಿದ ಅಪೇಕ್ಷಿಸದ ರಕ್ತದ ಘಟಕಗಳನ್ನು ದಾನಿಗೆ ಹಿಂದಿರುಗಿಸುವ ಯಂತ್ರ. ಇಂತಹ ಯಂತ್ರಗಳಿದ್ದರೆ ರಕ್ತಕ್ಕೆ ಬೇಡಿಕೆ ಹೆಚ್ಚಿರುವಾಗ ಕೆಲಸವೂ ಸುಲಭ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಈ ಯಂತ್ರವಿಲ್ಲ. ನಿರಂತರವಾಗಿ ಜಿಲ್ಲೆಯಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚಾದರೆ ಈ ಯಂತ್ರವನ್ನು ಅಳವಡಿಸಲು ಕ್ರಮ ವಹಿಸಲಾಗುವುದು ಎನ್ನುತ್ತಾರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ.


ಒಬ್ಬ ವ್ಯಕ್ತಿ ದಾನ ಮಾಡುವ ರಕ್ತದಿಂದ ಮೂರು ರೋಗಿಗಳಿಗೆ ಪ್ರಯೋಜನವಾಗಲಿದೆ. ಡೆಂೆ ರೋಗಿಗಳಲ್ಲಿ ಪ್ಲೆಟ್‌ಲೆಟ್ ಕಡಿಮೆ ಇರಲಿದ್ದು, ಅಂತಹವರಿಗೆ ದಿನವೊಂದಕ್ಕೆ 6 ರಕ್ತದಾ0ನಿಗಳ ಅಗತ್ಯವಿರುತ್ತದೆ. ಜಿಲ್ಲೆಯಲ್ಲಿ ರಕ್ತಕ್ಕೆ ಕೊರತೆಯಾದರೆ ಮೈಸೂರು, ಮಂಗಳೂರಿಗೆ ಹೋಗಬೇಕಾದ ಸ್ಥಿತಿ ಇದೆ. ಆದ್ದರಿಂದ ಜಿಲ್ಲೆಯ ಸಂಘ, ಸಂಸ್ಥೆಗಳು ಹೆಚ್ಚಾಗಿ ರಕ್ತದಾನ ಶಿಬಿರ ಏರ್ಪಡಿಸಲು ಮುಂದಾಗಬೇಕು. ರಕ್ತದಾನ ಮಾಡುವ ಆಸಕ್ತರು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ರಕ್ತನಿಧಿ ಕೇಂದ್ರಕ್ಕೆ ಬಂದು ರಕ್ತ ನೀಡಬಹುದು. ಹಾಗೆಯೆ, ಕೇಂದ್ರವು ದಿನದ 24 ಗಂಟೆಗಳ ಕಾಲ ರಕ್ತ ಪೂರೈಕೆ ಮಾಡಲಿದೆ.
ರಕ್ತದಾನ ಮಾಡುವವರು 45 ಕೆಜಿ ಅಥವಾ ಅದಕ್ಕಿಂತ ಹೆಚ್ಚಿರಬೇಕು. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವು ಕನಿಷ್ಠ ಶೇ.12.5 ಗ್ರಾಂ ಇರಬೇಕು. ಪುರುಷರು 3 ಅಥವಾ ಹೆಚ್ಚು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಮಹಿಳೆಯರು 4 ತಿಂಗಳು ಅಥವಾ ಹೆಚ್ಚು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ಸಂಘ ಸಂಸ್ಥೆಯವರು, ರೋಗಿಗಳ ಸಂಬಂಧಿಕರು, ಸಾರ್ವಜನಿಕರಿಗೆ ರಕ್ತದಾನದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಯಾರಿಗೂ ತೊಂದರೆಯಾಗದಂತೆ ಸಂಘ ಸಂಸ್ಥೆ, ಕಾಲೇಜುಗಳೊಂದಿಗೆ ಒಟ್ಟಾಗಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತ ಸಂಗ್ರಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಡೆಂೆ ಪ್ರಕರಣ ಕಡಿಮೆಯಾದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ. ಕಳೆದ ಎರಡು ಮೂರು ವಾರಗಳಿಂದ ಬೇಡಿಕೆ ಹೆಚ್ಚಾಗಿದ್ದು, ರಕ್ತದಾನ ಮಾಡಲು ಆಸಕ್ತರು ರಕ್ತನಿಧಿ ಕೇಂದ್ರವನ್ನು ಸಂಪರ್ಕಿಸಬಹುದು.

ಡಾ.ಕರುಂಬಯ್ಯ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ, ಜಿಲ್ಲಾಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net