ಜಿಲ್ಲೆಯಲ್ಲಿ ಮತ್ತೆ ಜನರ ರಕ್ತ ಹೀರುವ ಖಾಸಗಿ ಫೈನಾನ್ಸ್ ಕಂಪನಿಗಳು ತಲೆ ಎತ್ತಿವೆ / ಸರ್ಕಾರ ಕಡಿವಾಣ ಹಾಕಬೇಕು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ದಂಧೆಯ ತಮಿಳುನಾಡಿನ ಫೈನಾನ್ಸ್ ಕಂಪನಿಗಳು ಮತ್ತೆ ತಲೆ ಎತ್ತಿವೆ. ಡಿ.ಡಿ.ಸಿ.ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡುವ ಯೋಜನೆ ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ಇದಕ್ಕೆ ಕಡಿವಾಣ ಬಿದ್ದಿತ್ತು. ಮತ್ತೆ ಮೂರು ತಿಂಗಳಿನಿAದ ಜನರ ರಕ್ತ ಹೀರುವ ಫೈನಾನ್ಸ್ ಕಂಪನಿಗಳು ಜಿಲ್ಲೆಯಲ್ಲಿ ತಲೆ ಎತ್ತಿವೆ.

ಕಳೆದ ೮ ವರ್ಷಗಳ ಹಿಂದೆ ಜಿಲ್ಲೆಯಾದ್ಯಂತ ಗಡಿಭಾಗಗಳಲ್ಲಿ ಜನರ ರಕ್ತ ಹೀರುವ ಖಾಸಗಿ ಫೈನಾನ್ಸ್ ಕಂಪನಿಗಳು ತಲೆ ಎತ್ತಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದವು. ಇದರಿಂದ ಅನೇಕ ಕುಟುಂಬಗಳು ಹಾಳಾಗಿದ್ದವು. ಕೆ.ಜಿ.ಎಫ್, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕಿನ ಗಡಿ ಭಾಗಗಳಲ್ಲಿ ಈ ದಂಧೆ ಹೆಚ್ಚಾಗಿತ್ತು.

ಒಂದು ಸಾವಿರಕ್ಕೆ ಶೇ.೧೨ ರಂತೆ ಬಡ್ಡಿ ವಸೂಲಿ ಮಾಡುವ ಮೂಲಕ ಜನರ ರಕ್ತವನ್ನು ಹೀರುತ್ತಿದ್ದರು. ಇದರಿಂದ ಅನೇಕರು ಪ್ರಾಣಗಳನ್ನು ಕಳೆದುಕೊಂಡಿದ್ದರು. ಕಳೆದ ೮ ವರ್ಷಗಳ ಹಿಂದೆ ಡಿ.ಸಿ.ಸಿ.ಬ್ಯಾಂಕ್ ವತಿಯಿಂದ ಸ್ತಿçÃಶಕ್ತಿ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡುವ ಯೋಜನೆಯನ್ನು ಬ್ಯಾಂಕಿನ ಅಧ್ಯಕ್ಷ ಗೋವಿಂದಗೌಡರು ಜಾರಿಗೆ ತಂದರು.

ನಂತರ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಬಳಿ ಕೋಲಾರ ಜಿಲ್ಲೆಯ ಶಾಸಕರು ಹಾಗೂ ಬ್ಯಾಂಕಿನ ಅಧ್ಯಕ್ಷ ಗೋವಿಂದಗೌಡರು ಒತ್ತಡ ತಂದು ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತಾರಗೊಳಿಸಿದಾಗ ಖಾಸಗಿ ಫೈನಾನ್ಸ್ ಕಂಪನಿಗಳು ಗಂಟು ಮೂಟೆ ಕಟ್ಟಿ ಜಾಗ ಖಾಲಿ ಮಾಡಿದರು.

ಕಳೆದ ೪ ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ತಿçÃಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ಬಗ್ಗೆ ಜೆಡಿಎಸ್. ಮತ್ತು ಕಾಂಗ್ರೇಸ್ ನವರು ಭರವಸೆ ನೀಡಿದ್ದಾರೆಂದು ಡಿ.ಸಿ.ಸಿ.ಬ್ಯಾಂಕ್‌ಗೆ ಕಟ್ಟಬೇಕಾದ ಸ್ತಿçÃಶಕ್ತಿ ಸಂಘಗಳ ಕೆಲವು ಸ್ವ-ಸಹಾಯ ಸಂಘಗಳು ಸಾಲ ಮರುಪಾವತಿ ಮಾಡದೆ ಇರುವುದರಿಂದ ಡಿ.ಸಿ.ಸಿ.ಬ್ಯಾಂಕ್‌ನವರು ಹೊಸ ಸಾಲ ನೀಡಲು ಮುಂದಾಗಲಿಲ್ಲ.

ಇದರಿಂದಾಗಿ ಮತ್ತೆ ಸ್ವ-ಸಹಾಯ ಸಂಘಗಳ ಗುಂಪುಗಳು ಖಾಸಗಿ ಫೈನಾನ್ಸ್ ಕಂಪನಿಗಳ ಮೊರೆ ಹೋಗುವಂತೆ ಆಗಿದೆ. ಶ್ರೀನಿವಾಸಪುರ ತಾಲ್ಲೂಕು ಬದ್ದಿಪಲ್ಲಿ, ಪೆದ್ದೂರು, ಯಡಗಾನಪಲ್ಲಿ, ಎ.ಪತ್ತೂರು, ಗುಡಿಪಲ್ಲಿ, ಕೆ.ಪಾತೂರು, ಅಡವಿ ಬೈರಗಾನಪಲ್ಲಿ, ಕೂರಿಗೆಪಲ್ಲಿ ಮುಂತಾದ ಗಡಿ ಗ್ರಾಮಗಳ ಮಹಿಳೆಯರಿಗೆ ತಮಿಳುನಾಡು ಮೂಲದ ಪಿ.ಎಂ.ಎಫ್. ಫೈನಾನ್ಸ್ ಹೆಸರಿನಲ್ಲಿ ಮಹಿಳೆಯರಿಗೆ ೧ ಲಕ್ಷದ ತನಕ ಸಾಲ ನೀಡುವುದಾಗಿ ೨೬೦೦ ರೂ ಮುಂಗಡ ಮತ್ತು ೫೦,೦೦೦ ಸಾವಿರಕ್ಕೆ ೧,೩೦೦ ರೂ.ಗಳು ಮುಂಗಡವಾಗಿ ಪಡೆದು ೧೦ ಕ್ಕೂ ಹೆಚ್ಚು ಗ್ರಾಮಗಳಲ್ಲಿ ೩ ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿ ನಮ್ಮ ಕಛೇರಿ ಚಿಂತಾಮಣಿಯಲ್ಲಿ ಇರುವುದು ಅಲ್ಲಿಗೆ ಬನ್ನಿ ಎಂದು ಯಾಮಾರಿಸಿ ನಂತರ ಮೊಬೈಲ್ ಸ್ವಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಇನ್ನೂ ಕೆಲವು ಗ್ರಾಮಗಳಲ್ಲಿ ಶೇ.೩ ರ ಬಡ್ಡಿ ದರದಲ್ಲಿ ಸಾಲ ನೀಡಿ, ವಾರಕ್ಕೊಮ್ಮೆ ವಸೂಲಾತಿ ಮಾಡುತ್ತಿದ್ದಾರೆ. ಇದು ಶ್ರೀನಿವಾಸಪುರ ತಾಲ್ಲೂಕಿಗೆ ಸೀಮಿತವಾಗಿಲ್ಲ. ಮುಳಬಾಗಿಲು, ಬಂಗಾರಪೇಟೆ, ಕೆ.ಜಿ.ಎಫ್. ತಾಲ್ಲೂಕಿನ ಗಡಿ ಭಾಗಗಳನ್ನು ಸುಮಾರು ೧೦ ವರ್ಷಗಳಿಂದಲೂ ಮುಂದುವರೆಸಿಕೊAಡು ಬರುತ್ತಿದ್ದಾರೆ. ಡಿ.ಸಿ.ಸಿ. ಬ್ಯಾಂಕ್ ಶೂನ್ಯ ಬಡ್ಡಿ ಸಾಲ ಯೋಜನೆ ಜಾರಿಗೆ ಬಂದ ನಂತರ ಇದು ಕಡಿಮೆಯಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ಖಾಸಗಿ ಕಂಪನಿಗಳವರ ದಂಧೆ ಮುಂದುವರೆದಿದೆ.

ಕೋಟ್
ಖಾಸಗಿ ಫೈನಾನ್ಸ್ ಕಂಪನಿಗಳವರು ಮತ್ತೆ ತಮ್ಮ ಅಟ್ಟಹಾಸವನ್ನು ಮರೆಯುತ್ತಿದ್ದಾರೆ. ಡಿ.ಸಿ.ಸಿ.ಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿ ಮತ್ತೆ ಅಲ್ಲೇ ಸಾಲ ಪಡೆಯಬಹುದಾಗಿತ್ತು. ಅಲ್ಲಿ ಬಾಕಿ ಇರುವುದರಿಂದ ಖಾಸಗಿ ಫೈನಾನ್ಸ್ ಗಳ ರವರ ಬಳಿ ಮತ್ತೆ ಸಾಲವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಅವರು ವಾರಕ್ಕೊಮ್ಮೆ ಗ್ರಾಮಕ್ಕೆ ಬಂದು ಬಡ್ಡಿ ಅಸಲು ಸಮೇತ ಜನರ ರಕ್ತ ಹೀರುವ ಕೆಲಸ ಪ್ರಾರಂಭ ಮಾಡಿದ್ದಾರೆ. ಇದಕ್ಕೆ ಸರ್ಕಾರ ಕೂಡಲೇ ಕಡಿವಾಣ ಹಾಕಿ ಖಾಸಗಿ ಫೈನಾನ್ಸ್ ಕಂಪನಿಗಳವರನ್ನು ಓಡಿಸಬೇಕು.

-ಅಮರನಾಥ್, ಕೆ.ಪಾತೂರು

ಚಿತ್ರ ೧೨ ಕೆ.ಎಲ್.ಆರ್. ೦೩ : ತಮಿಳುನಾಡು ಮೂಲದ ಖಾಸಗಿ ಫೈನಾನ್ಸ್ ಕಂಪನಿಯ ವ್ಯಕ್ತಿ ಕೆ.ಪಾತೂರು ಗ್ರಾಮದಲ್ಲಿ ಸಾಲ ವಸೂಲಾತಿಗೆ ದ್ವಿಚಕ್ರ ವಾಹನದಲ್ಲಿ ಬಂದಿರುವ ವ್ಯಕ್ತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net