ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ೫,೭೬೬ ಕುರಿ ಮತ್ತು ಮೇಕೆಗಳಿಗೆ ೨ ಕೋಟಿ ೯ ಲಕ್ಷದ ೮೫ ಸಾವಿರ ಪರಿಹಾರ ನೀಡಲಾಗಿದೆ / ಡಾ.ಜಿ.ಎಂ.ರಮೇಶ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಆಕಸ್ಮಿಕವಾಗಿ ಮೃತಪಟ್ಟಿರುವ ೫,೭೬೬ ಕುರಿ ಮತ್ತು ಮೇಕೆಗಳಿಗೆ ತಲಾ ಒಂದಕ್ಕೆ ೭,೫೦೦ ರೂ.ಗಳ ಪರಿಹಾರದಂತೆ ರಾಜ್ಯ ಸರ್ಕಾರದಿಂದ ಇದುವರೆಗೂ ಸುಮಾರು ಎರಡು ಕೋಟಿ ಒಂಬತ್ತು ಲಕ್ಷ ದ ೮೫ ಸಾವಿರ ರೂ.ಗಳನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಪಶು ಇಲಾಖೆ ಉಪ ನಿರ್ದೇಶಕರಾದ ಡಾ.ಜಿ.ಎಂ.ರಮೇಶ್ ತಿಳಿಸಿದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅವರು ಇದರ ಜೊತೆಯಲ್ಲೇ ೩೧೩ ಹಸು ಎಮ್ಮೆಗಳಿಗೆ ತಲಾ ಒಂದಕ್ಕೆ ೧೫ ಸಾವಿರ ರೂ. ನಂತೆ ೩೧ ಲಕ್ಷದ ೩೦ ಸಾವಿರಗಳನ್ನು ಬಿಡುಗಡೆಯಾಗಿದ್ದು, ಬಾಕಿ ಇರುವ ಪರಿಹಾರದ ಹಣ ಬಿಡುಗಡೆಯಾಗಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯ ರೈತರಿಗೆ ೩೦ ದಿನಗಳ ಕಾಲ ಕುರಿ, ಮೇಕೆ, ಹಂದಿ, ಹಾಗೂ ಹಸು ಸಾಕಾಣಿಕೆ ತರಬೇತಿಗೆ ಸಿದ್ದವಿದ್ದು, ತಿಂಗಳಲ್ಲಿ ಎರಡು ದಿನ ಜಾನುವಾರಗಳ ಸಾಕಾಣಿಕೆಯ ಬಗ್ಗೆ ಇಲಾಖೆ ವೈದ್ಯರಿಂದ ತರಬೇತಿ ನೀಡುವ ಜತೆಯಲ್ಲೇ ಗೌರವಧನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಪ್ರತಿಯೊಂದು ತಾಲೂಕುಗಳಲ್ಲಿ ಅಕ್ಟೋಬರ್ ತಿಂಗಳಿನಿAದ ಜನವರಿ ತಿಂಗಳವರೆಗೂ ಹಾಲು ಕರೆಯುವ ಸ್ಪರ್ಧೆಯನ್ನು ಪಶು ಇಲಾಖೆ ವತಿಯಿಂದ ಆಯೋಜನೆ ಮಾಡಲು ಮುಂದಾಗಿದ್ದೇವೆ. ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಎರಡು ಕೇಂದ್ರಗಳಲ್ಲಿ ಜಾನುವಾರು ಆರೋಗ್ಯ ಶಿಬಿರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದರ ಜೊತೆಗೆ ರೈತರಿಗೆ ಪಶು ಇಲಾಖೆ ವತಿಯಿಂದ ಅಧ್ಯಯನ ಪ್ರವಾಸದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ಇದರ ಸದುಪಯೋಗಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಜಾನುವಾರಗಳಿಗೆ ಹಾಗೂ ಶ್ವಾನಗಳಿಗೆ ಉಚಿತವಾಗಿ ಕಾಲುಬಾಯಿ, ಚರ್ಮಗಂಟು ರೋಗ, ಹಾಗೂ ಕಂದು ರೋಗದ, ಹಾಗೂ ರೇಬಿಸ್ ಲಸಿಕೆಗಳನ್ನು ನೀಡುತ್ತಿದ್ದು, ರೈತರ ಹಾಗೂ ಸಾರ್ವಜನಿಕರು ಇದರ ಸದುಪಯೋಗಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಚಿತ್ರ ೦೭ ಕೆ.ಎಲ್.ಆರ್. ೦೩ : ಪಶುಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ರಮೇಶ್ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net