ಜಿಲ್ಲೆಯಲ್ಲಿ 969 ಜನರಿಗೆ ಪಾಸಿಟಿವ್

Corona
Published on

ಹುಬ್ಬಳ್ಳಿ: ಜನತಾ ಕರ್ಫ್ಯೂ, ಲಾಕ್​ಡೌನ್, ಮಾರ್ಗಸೂಚಿಗಳ ಪಾಲನೆಗೆ ಜಾಗೃತಿ ಸೇರಿ ಎಲ್ಲ ಮುನ್ನೆಚ್ಚರಿಕೆ ಕ್ರಮ ಜಾರಿಯಲ್ಲಿದ್ದರೂ ಧಾರವಾಡ ಜಿಲ್ಲೆಯಲ್ಲಿ ನಿತ್ಯದ ಕರೊನಾ ಸೋಂಕು ಪ್ರಕರಣ ಸಾವಿರದ ಆಚೀಚೆಯೇ ಬರುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಲಾಕ್​ಡೌನ್ ಬಿಗಿಯಾಗುವ ಮತ್ತು ವಿಸ್ತರಣೆಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ.

ಮಂಗಳವಾರದ ಪ್ರಯೋಗಾಲಯ ವರದಿ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 969 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 793 ಜನರು ಕರೊನಾ ಗೆದ್ದು ವಿವಿಧ ಆಸ್ಪತ್ರೆ ಮತ್ತು ಕಾಳಜಿ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 6199 ಸಕ್ರಿಯ ಪ್ರಕರಣಗಳಿವೆ. ವೈರಾಣುಗಳು ಮೂವರನ್ನು ಬಲಿ ಪಡೆದಿವೆ. ಇದರಿಂದ, ಜಿಲ್ಲೆಯಲ್ಲಿ ಸಂಭವಿಸಿದ ಒಟ್ಟು ಕರೊನಾ ಸಾವಿನ ಪ್ರಕರಣ 806ಕ್ಕೆ ಏರಿದೆ. ಕಳೆದ ವರ್ಷದಂತೆ ಸರ್ಕಾರದ ವತಿಯಿಂದ ಮನೆ ಮನೆ ಸಮೀಕ್ಷೆ ನಡೆಸಿ ಜ್ವರ, ನೆಗಡಿ ಇತ್ಯಾದಿ ಇರುವವರ ಪರೀಕ್ಷೆ ಮಾಡಿಸಲಾಗುತ್ತಿಲ್ಲ. ಆರೋಗ್ಯ ತೊಂದರೆ ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆಗೆ ಬಂದವರ ಪರೀಕ್ಷೆ ಮಾಡಿಸಲಾಗುತ್ತಿದೆ. ಕೆಲವರು ಸ್ವಯಂಆಸಕ್ತಿಯಿಂದ ಗಂಟಲ ದ್ರವ ಪರೀಕ್ಷೆಗೆ ನೀಡಲು ಮುಂದೆ ಬರುತ್ತಿದ್ದಾರೆ. ದಿನಕ್ಕೆ 2000 ದಷ್ಟು ಮಾದರಿಗಳನ್ನು ಜಿಲ್ಲೆಯಲ್ಲಿ ಪರೀಕ್ಷೆ ಮಾಡುತ್ತಿದ್ದು, ಅದರಲ್ಲಿ ಅರ್ಧದಷ್ಟು ಜನರಿಗೆ ಕರೊನಾ ದೃಢಪಡುತ್ತಿದ್ದು, ಪರಿಸ್ಥಿತಿ ಇನ್ನೂ ಗಂಭೀರತೆಯಿಂದ ಕೂಡಿದೆ ಎಂಬುದನ್ನು ಪುಷ್ಟೀಕರಿಸುತ್ತದೆ.

ರೆಮ್ೆಸಿವಿರ್ ಮಾಹಿತಿ

ಧಾರವಾಡ ಜಿಲ್ಲೆಯ 33 ಖಾಸಗಿ ಆಸ್ಪತ್ರೆಗಳಿಗೆ ರೆಮ್ೆಸಿವಿರ್ ಇಂಜೆಕ್ಷನ್ ಒದಗಿಸಿದ್ದು, ಸೋಮವಾರದ ಸಂಜೆವರೆಗಿನ ಮಾಹಿತಿ ಪ್ರಕಾರ ಒಟ್ಟು 991 ಇಂಜೆಕ್ಷನ್​ಗಳು ಉಳಿದಿವೆ.

781 ಹಾಸಿಗೆ ಲಭ್ಯ

ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲಿಯ ಒಟ್ಟು 3152 ಹಾಸಿಗೆಗಳಲ್ಲಿ (ಮಂಗಳವಾರ ಸಂಜೆ ವೇಳೆಗೆ) 2371 ಭರ್ತಿಯಾಗಿದ್ದು, 781 ಹಾಸಿಗೆಗಳು ಲಭ್ಯವಿವೆ. ಒಟ್ಟು 2238 ಆಕ್ಸಿಜನ್ ಬೆಡ್​ಗಳಲ್ಲಿ 169, ಒಟ್ಟು 180 ವೆಂಟಿಲೇಟರ್​ಗಳಲ್ಲಿ 3 ಹಾಗೂ ಒಟ್ಟು 382 ಐಸಿಯು ಹಾಸಿಗೆಗಳಲ್ಲಿ 3 ಖಾಲಿ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net