ಜಿಲ್ಲೆಯ ವಿವಿಧೆಡೆ ಬ್ರಹ್ಮರಥೋತ್ಸವ ಸಂಪನ್ನ, ಕರೊನಾ ಕಾರ್ಮೋಡ ಕಳೆದು ಮರುಕಳಿಸಿದ ವೈಭವ, ಲಕ್ಷಾಂತರ ಭಕ್ತರಿಂದ ದೈವಾರಾಧನೆ

18 tubagere 01
Published on

ತೂಬಗೆರೆ: ಇತಿಹಾಸ ಪ್ರಸಿದ್ದ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ಶ್ರೀದೇವಿ ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಜೈಕಾರದೊಂದಿಗೆ ಭಕ್ತರು ತೇರಿಗೆ ಬಾಳೇಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ಮುಂಜಾನೆ ಶ್ರೀನಿವಾಸ ಕಲ್ಯಾಣ ಜರುಗಿತು. ದೇವರಿಗೆ ವಿಶೇಷ ಅಲಂಕಾರ, ಪೂಜೆಗಳು ನೆರವೇರಿದವು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಸಂಸದ ವೀರಪ್ಪ ಮೊಯ್ಲಿ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಪ್ರಸನ್ನ ಫೌಂಡೇಷನ್ ಅಧ್ಯಕ್ಷ ಪ್ರಸನ್ನ ಪಿ.ಗೌಡ, ಮುಖಂಡರಾದ ವೆಂಕಟೇಶಮೂರ್ತಿ, ಕಿಟ್ಟಿ, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಹಿತ ರಕ್ಷಣಾ ಸಮಿತಿ ಅಧ್ಯಕ್ಷ ರವಿಸಿದ್ದಪ್ಪ ಮತ್ತಿತರರು ಪಾಲ್ಗೊಂಡಿದ್ದರು. 5 ಸಾವಿರ ಜನರಿಗೆ ಅನ್ನದಾಸೋಹ ನೆರವೇರಿಸಲಾಯಿತು. ಜಾತ್ರೆಯ ಪ್ರಯುಕ್ತ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳಿಂದ ತೂಬಗೆರೆ ಬೀದಿ ಬೀದಿಗಳಲ್ಲಿ ಕೌಟೌಟ್ ರಾರಾಜಿಸಿದವು. ತೂಬಗೆರೆ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net