ವಿಜಯವಾಣಿ ಸುದ್ದಿಜಾಲ ಕೋಲಾರ
ಅಸ್ಪೃಶ್ಯತೆ ನಿವಾರಣೆಗಾಗಿ ರಾಜ್ಯಾದ್ಯಂತ ಅರಿವು ಭಾರತ ಸಂಸ್ಥೆ ಮುಂದಾಗಿದ್ದು, ಕೋಲಾರ ಜಿಲ್ಲೆಯ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೆ ಜಾತಿ, ಭೇದ, ಲಿಂಗ ಎಣಿಸದೆ ಮುಕ್ತ ಪ್ರವೇಶ ಮಾಡಲು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಮತ್ತು ಕೋಲಾರ ಜಿಲ್ಲಾಡಳಿತ, ಅರಿವು ಭಾರತ ಸಂಸ್ಥೆ ಮುಂದಾಗಿದ್ದು, ೨ನೇ ಹಂತದಲ್ಲಿ ದೇವಾಲಯಗಳ ಆವರಣದಲ್ಲಿ ನಾಮಪಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.
ಅರಿವು ಭಾರತ ಸಂಸ್ಥೆ ಈಗಾಗಲೇ ರಾಜ್ಯಾದ್ಯಂತ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದಲಿತರ ಮನೆಗಳ ಗೃಹಪ್ರವೇಶ ಮಾಡುವ ಮೂಲಕ ಸವರ್ಣೀಯರ ಮನೆಗಳಿಗೆ ದಲಿತರನ್ನು ಕರೆದೊಯ್ಯುವ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಹಭೋಜನ ಕೂಟ ಏರ್ಪಡಿಸುವ ಕಾರ್ಯವನ್ನು ಪ್ರಥಮ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಿ ನಂತರ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯಾ ಜಿಲ್ಲಾಡಳಿತ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.
೨೦೧೪ರಲ್ಲಿ ಅಂದಿನ ದಿವಂಗತ ಡಿ.ಕೆ.ರವಿ ರವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅರಿವು ಭಾರತ ಸಂಸ್ಥೆಯನ್ನು ಕೋಲಾರದಲ್ಲಿ ಹುಟ್ಟಿಹಾಕಿ ಪ್ರಥಮ ಬಾರಿಗೆ ದಲಿತ ಮನೆಗಳಿಗೆ ಗೃಹಪ್ರವೇಶ ಎಂಬ ಶೀರ್ಷಿಕೆ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದರು. ನಂತರ ಮುಜರಾಯಿ ದೇವಸ್ಥಾನಗಳಿಗೆ ಮುಕ್ತವಾಗಿ ಎಲ್ಲಾ ಸಮುದಾಯಗಳವರು ಜಾತಿ ಭೇದವಿಲ್ಲದೆ ಪ್ರವೇಶ ಮಾಡಬೇಕೆಂದು ಆಗಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದರು.
ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಿವು ಭಾರತ ಸಂಸ್ಥೆಯ ಮನವಿಯನ್ನು ಅಂಗೀಕರಿಸಿ ರಾಜ್ಯಾಂದ್ಯAತ ಇರುವ ಮುಜರಾಯಿ ದೇವಸ್ಥಾನಗಳಿಗೆ ಎಲ್ಲಾ ಜನಾಂಗದವರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.
ಮೊದಲನೇ ಹಂತವಾಗಿ ಕೋಲಾರ ಜಿಲ್ಲೆಯಲ್ಲಿ ೨೦೧೮ ಮತ್ತು ೨೦೧೯ನೇ ಸಾಲಿನಲ್ಲಿ ಅರಿವು ಭಾರತ ಸಂಸ್ಥೆ, ಧಾರ್ಮಿಕ ದತ್ತಿ ಇಲಾಖೆ ಮತ್ತು ಜಿಲ್ಲಾಡಳಿತ ಕೆಲವು ದೇವಸ್ಥಾನಗಳಿಗೆ ಮುಕ್ತ ಪ್ರವೇಶ ಎಂಬ ಸ್ಟಿಕ್ಕರ್‌ಗಳನ್ನು ಅಂಟಿಸಿದರು. ಆದರೆ ಜಿಲ್ಲೆಯ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೆ ಸ್ಟಿಕ್ಕರ್‌ಗಳನ್ನು ತಲುಪಿಸಲು ಸಾಧ್ಯವಾಗಿರಲಿಲ್ಲ.
ಈಗಿನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರವರ ಜೊತೆಗೂಡಿರುವ ಅರಿವು ಭಾರತ ಸಂಸ್ಥೆ, ಸಾಹಿತಿಗಳು, ಪ್ರಗತಿಪರರು, ವಿವಿಧ ಸಂಘಸAಸ್ಥೆಗಳವರು ಸೇರಿ ಧಾರ್ಮಿಕ ದತ್ತಿ ಇಲಾಖೆಯೊಂದಿಗೆ ದೊಡ್ಡ ದೊಡ್ಡ ನಾಮಪಲಕಗಳನ್ನು ಮುಜರಾಯಿ ಇಲಾಖೆಗೆ ಸೇರುವ ೧೩೦೦ ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ.
ಇದರ ಭಾಗವಾಗಿ ಕೋಲಾರ ನಗರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಯಾವುದೇ ಜಾತಿ, ಜನಾಂಗ, ಧರ್ಮ, ಲಿಂಗಭೇದವಿಲ್ಲದೆ ದೇವರ ದರ್ಶನಕ್ಕೆ ಸರ್ವರಿಗೂ ಮುಕ್ತ ಪ್ರವೇಶವಿರುತ್ತದೆ ಎಂಬ ನಾಮಪಲಕವನ್ನು ಅಳವಡಿಸಿದ್ದಾರೆ. ಅರಿವು ಭಾರತ ಸಂಸ್ಥೆಯ ಸಂಸ್ಥಾಪಕ ಅರಿವು ಶಿವಪ್ಪ ಗಮನ ಮಹಿಳಾ ಸಂಸ್ಥೆಯ ಶಾಂತಮ್ಮ, ಕೊಂಡರಾಜನಹಳ್ಳಿ ಮಂಜುಳ, ಸಾಹಿತಿ ಸಾ.ರಘುನಾಥ್, ಮುಜರಾಯಿ ತಹಶೀಲ್ದಾರ್ ಶ್ರೀನಿವಾಸರೆಡ್ಡಿ ಜೊತೆಗೂಡಿ ನಾಮಪಲಕವನ್ನು ಅಳವಡಿಸಿದ್ದಾರೆ.
ಕೋಟ್
ಮುಜರಾಯಿ ಇಲಾಖೆಗೆ ಸೇರುವ ಎ.ಗ್ರೇಡ್ ಬಿ.ಗ್ರೇಡ್ ಮತ್ತು ಸಿ.ಗ್ರೇಡ್ ದೇವಸ್ಥಾನಗಳಿಗೆ ಎಲ್ಲಾ ಸಮುದಾಯ ಮತ್ತು ಜನಾಂಗಕ್ಕೆ ಮುಕ್ತ ಪ್ರವೇಶಕ್ಕೆ ಅವಕಾಶವಿದೆ ಎಂದು ನಾಮಪಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಎ.ಗ್ರೇಡ್ ೦೬, ಬಿ.ಗ್ರೇಡ್ ೧೮, ಸಿ.ಗ್ರೇಡ್ ೧೩೦೦ ದೇವಸ್ಥಾನಗಳಿವೆ. ಎಲ್ಲಾ ದೇವಸ್ಥಾನಗಳಿಗೂ ದೀರ್ಘಕಾಲದಲ್ಲಿ ಬಾಳಿಕೆ ಬರುವಂತಹ ನಾಮಪಲಕಗಳನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸೂಚನೆ ಮೇರೆಗೆ ಅಳವಡಿಸಲಾಗುತ್ತಿದೆ.
-ಶ್ರೀನಿವಾಸರೆಡ್ಡಿ, ಮುಜರಾಯಿ ತಹಶೀಲ್ದಾರ್.
ಕೋಟ್
ಅರಿವು ಭಾರತ ಸಂಸ್ಥೆ ವತಿಯಿಂದ ಅಸ್ಪೃಶ್ಯತೆಯನ್ನು ನಿವಾರಣೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದಲಿತರ ಗೃಹಪ್ರವೇಶ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮುಂದಾಗಿದ್ದು, ಇದು ಯಶಸ್ವಿಯಾಗಿ ನಡೆಯುತ್ತಿದೆ. ಈಗಲೂ ಹಳ್ಳಿಗಳಲ್ಲಿ ದೇವಸ್ಥಾನಗಳ ಪ್ರವೇಶಕ್ಕೆ ನಿಶೇಧ ಇದೆ. ಈ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಿಗೆ ಮುಕ್ತ ಅವಕಾಶವನ್ನು ಎಲ್ಲಾ ಸಮುದಾಯದವರು ಸಿಗಬೇಕೆಂಬ ಕಾರಣದಿಂದ ಜಿಲ್ಲಾಡಳಿತದೊಂದಿಗೆ ಅರಿವು ಭಾರತ ಸಂಸ್ಥೆ, ಸಾಹಿತಿಗಳು, ಪ್ರಗತಿಪರರು ಸೇರಿ ನಾಮಪಲಕಗಳನ್ನು ೨ನೇ ಸುತ್ತಿನಲ್ಲಿ ಅಳವಡಿಸಲಾಗುತ್ತಿದೆ. ಇದರ ಜೊತೆಗೆ ಗ್ರಾಮಗಳಿಗೆ ತೆರಳಿ ಸಾಮರಸ್ಯ ಮೂಡಿಸುವಂತಹ ಕೆಲಸ ಮಾಡುತ್ತೇವೆ.
-ಅರಿವು ಶಿವಪ್ಪ, ಅರಿವು ಭಾರತ ಸಂಸ್ಥೆ ಸಂಸ್ಥಾಪಕರು.
ಚಿತ್ರ ೨೭ ಕೆ.ಎಲ್.ಆರ್. ೦೧ : ನಗರದ ಸೋಮೇಶ್ವರ ದೇವಸ್ಥಾನದಲ್ಲಿ ಸರ್ವರಿಗೂ ಮುಕ್ತ ಅವಕಾಶವಿದೆ ಎಂದು ನಾಮಪಲಕವನ್ನು ಅಳವಡಿಸಿರುವುದು.
ಚಿತ್ರ ೨೭ ಕೆ.ಎಲ್.ಆರ್. ೦೧ಎ : ಅರಿವು ಭಾರತ ಸಂಸ್ಥೆಯ ಸಂಸ್ಥಾಪಕ ಅರಿವು ಶಿವಪ್ಪ ಮತ್ತು ಗಮನ ಸಂಸ್ಥೆ ಶಾಂತಮ್ಮ, ಕೊಂಡರಾಜನಹಳ್ಳಿ ಮಂಜುಳ, ಮುಜರಾಯಿ ತಹಶೀಲ್ದಾರ್ ಶ್ರೀನಿವಾಸ್‌ರೆಡ್ಡಿ ಇವರು ಸೋಮೇಶ್ವರ ದೇವಸ್ಥಾನದಲ್ಲಿ ನಾಪಮಲಕವನ್ನು ಅಳವಡಿಸಿರುವುದು.
ಚಿತ್ರ ೨೭ ಕೆ.ಎಲ್.ಆರ್. ೦೧ಬಿ : ಅರಿವು ಶಿವಪ್ಪ, ಅರಿವು ಭಾರತ ಸಂಸ್ಥೆಯ ಸಂಸ್ಥಾಪಕರು. ರವರ ಭಾವಚಿತ್ರ