ಜಿಲ್ಲೆಯ ಎಂಪಿಸಿಎಸ್‌ಗಳಿಗೆ ಸಹಕಾರ ಪತ್ರಿಕೆ ಸರಬರಾಜು / ಕೋಚಿಮುಲ್ ಅಧ್ಯಕ್ಷರಿಂದ ಚಂದಾ ಸ್ವೀಕರಿಸಿದ ಸುರೇಶ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸಹಕಾರ ರಂಗದ ಬಲವರ್ಧನೆಗೆ ಅಗತ್ಯವಾದ ಮಾಹಿತಿಗಳನ್ನು ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವವರು ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಕರ್ನಾಟಕ ರಾಜ್ಯ ಸಹಕಾರ ವಾರಪತ್ರಿಕೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ತಿಳಿಸಿದರು.

ಜಿಲ್ಲೆಯ ಎಲ್ಲಾ ಎಂಪಿಎಸ್‌ಗಳಿಗೆ ಪತ್ರಿಕೆ ಸರಬರಾಜು ಮಾಡಲು ಅಗತ್ಯವಾದ ಕರ್ನಾಟಕ ರಾಜ್ಯ ಸಹಕಾರ ವಾರಪತ್ರಿಕೆಯ ಐದು ವರ್ಷದ ವಾರ್ಷಿಕ ಚಂದ ೧೧.೨೩ ಲಕ್ಷ ರೂಗಳ ಚೆಕ್‌ಅನ್ನು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ ವೈ ನಂಜೇಗೌಡರಿAದ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯ ಎಲ್ಲಾ ಎಂಪಿಸಿಎಸ್‌ಗಳಿಗೆ ಪತ್ರಿಕೆ ಸರಬರಾಜಗಲು ಒಪ್ಪಿಗೆ ನೀಡಿ, ಐದುವರ್ಷದ ಚಂದಾ ನೀಡಿದ ಶಾಸಕರೂ ಹಾಗೂ ಕೋಚಿಮುಲ್ ಅಧ್ಯಕ್ಷರಾದ ಕೆ.ವೈ.ನಂಜೇಗೌಡರಿಗೆ ಅವರು ಧನ್ಯವಾದ ತಿಳಿಸಿ, ಸಹಕಾರ ರಂಗ ಬಡವರ ಕ್ಷೇತ್ರವಾಗಿದ್ದು, ಇಲ್ಲಿ ಪಾರದರ್ಶಕತೆ ಹಾಗೂ ಉತ್ತಮ ಆಡಳಿತಕ್ಕೆ ಅವಕಾಶ ಕಲ್ಪಿಸುವ ಧ್ಯೇಯದಿಂದ ಸಹಕಾರ ಪತ್ರಿಕೆ ಪಡೆಯಲು ಮುಂದಾಗಿದ್ದು ಶ್ಲಾಘನೀಯ ಎಂದರು.

ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷರಾದ ಬೈರೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಹಾಗೂ ರವಿ ಹಾಜರಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೭ : ಕೋಲಾರ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕರ್ನಾಟಕ ರಾಜ್ಯ ಸಹಕಾರ ವಾರಪತ್ರಿಕೆ ಸರಬರಾಜು ಮಾಡಲು ಅಗತ್ಯವಾದ ಪತ್ರಿಕೆಯ ಐದು ವರ್ಷದ ವಾರ್ಷಿಕ ಚಂದ ೧೧.೨೩ ಲಕ್ಷ ರೂಗಳ ಚೆಕ್‌ಅನ್ನು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ ವೈ ನಂಜೇಗೌಡರಿAದ ಸಹಕಾರಿ ಯೂನಿಯನ್ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net