

ತುಮಕೂರು: ಯುದ್ಧ ಭೀತಿಯಿಂದ ತತ್ತರಿಸಿರುವ ಯೂಕ್ರೇನ್‌ನಲ್ಲಿ ತುಮಕೂರು ಜಿಲ್ಲೆಯ ಒಟ್ಟು 16 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಸತತ 2 ದಿನಗಳ ಯುದ್ಧಾತಂಕದಲ್ಲಿ ಕಾರ್ಕೀವ್ ನಗರದ ಮೆಟ್ರೋ ಸ್ಟೇಷನ್‌ನಲ್ಲಿ ಕಾಲ ಕಳೆಯುತ್ತಿರುವ ವಿದ್ಯಾರ್ಥಿಗಳ ಚಿತ್ತ ಈಗ ಮಾತೃಭೂಮಿಯತ್ತ ಹರಿದಿದೆ.
ಯೂಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ್ದು, ಗುರುವಾರದಿಂದಲೇ ಸುರಕ್ಷಿತ ಸ್ಥಳದಲ್ಲಿರುವ ವಿದ್ಯಾರ್ಥಿಗಳು ಅಲ್ಲಿಂದಲೇ ಪಾಲಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಗುರುವಾರವೇ ತುಮಕೂರು ಮೂಲದ 10 ವಿದ್ಯಾರ್ಥಿಗಳು ಹೆಸರು, ವಿಳಾಸ ಪತ್ತೆಯಾಗಿತ್ತು.
ಮಧುಗಿರಿ ತಾಲೂಕಿನ ರವಿತೇಜ್, ಅರಕೆರೆಯ ನಂದಿನಿ ಜತೆಗೆ ಸಂಪತ್‌ಗೌಡ, ರುದ್ರೇಶ್, ಸುಜಯ್, ಉದಿತ್, ಪ್ರಿಯಾಂಕ, ಶೀತಲ್, ಮೇಘಾ , ರೂಪಶ್ರೀ, ಪ್ರತಿಭಾ ಸೇರಿ 16 ವಿದ್ಯಾರ್ಥಿಗಳು ಯೂಕ್ರೇನ್ ಕಾರ್ಕೀವಾ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಸದ್ಯಕ್ಕೆ ಎಲ್ಲರೂ ಸಬ್‌ವೇ ಮೆಟ್ರೋನಲ್ಲಿ ಸುರಕ್ಷಿತವಾಗಿದ್ದಾರೆ. ನಿರಂತರವಾಗಿ ಭಾರತೀಯ ರಾಯಭಾರ ಕಚೇರಿ ಜತೆ ಸಂಪರ್ಕ ಸಾಧಿಸಿರುವ ಈ ಕನ್ನಡಿಗರು ತಾಯ್ನಡಿಗೆ ಮರಳುವ ತವಕದಲ್ಲಿದ್ದಾರೆ. ಆದಷ್ಟು ಬೇಗ ಇಲ್ಲಿಂದ ನಮ್ಮನ್ನು ಕರೆದೊಯ್ಯುವಂತೆ ಎಲ್ಲರೂ ಪ್ರಾರ್ಥಿಸುತ್ತಿರುವುದಾಗಿ ಅರಕೆರೆಯ ನಂದಿನಿ ‘ವಿಜಯವಾಣಿ’ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಗುರುವಾರ ಯುದ್ಧ ಆರಂಭವಾದಾಗಿನಿಂದ 20 ಸಾವಿರಕ್ಕೂ ಹೆಚ್ಚು ಭಾರತೀಯರು ಅತ್ಯಂತ ತಾಳ್ಮೆಯಿಂದ ಸುರಕ್ಷಿತ ಸ್ಥಳದಲ್ಲಿ ಇದ್ದೇವೆ. ಆದರೆ,-2 ಡಿಗ್ರಿ ಸೆಲ್ಷಿಯಸ್ ನಡುಗುವ ಚಳಿಯಲ್ಲಿ ಮೆಟ್ರೋ ಸ್ಟೇಷನ್ ಬೇಸ್‌ನಲ್ಲಿದ್ದೇವೆ. ಭಾರತ ಸರ್ಕಾರವು ನಮ್ಮನ್ನು ಸುರಕ್ಷಿತವಾಗಿ ಯೂಕ್ರೇನ್ ಗಡಿಭಾಗದಿಂದ ಕರೆದೊಯ್ಯುವ ಭರವಸೆ ನೀಡಿದೆಯಾದರೂ ಸಾವಿರಾರು ಕಿ.ಮೀ., ದೂರ ಕ್ರಮಿಸುವುದೇ ಅಸಾಧ್ಯವೆನಿಸಿದೆ. ಕ್ಷಣ, ಕ್ಷಣವೂ ಇಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸಂಪತ್ ಗೌಡ ಎಂಬಿಬಿಎಸ್ ವಿದ್ಯಾರ್ಥಿ