

ಚಿತ್ರದುರ್ಗ: ಲೀಡ್ ಬ್ಯಾಂಕ್ ಆದೇಶ ಉಲ್ಲಂಘಿಸಿ ರೈತರ ಸಾಲ ವಸೂಲಿ ಮಾಡುತ್ತಿರುವ ಹಾಗೂ ಸಾಲ ತಿರುವಳಿ ಆಗಿದ್ದರೂ ಅಡವಿಟ್ಟ ಬಂಗಾರ ಹಿಂತಿರುಗಿ ಸದೆ ರೈತ ಮಹಿಳೆಯರನ್ನು ಅವಮಾನಗೊಳಿಸಿರುವ ಜಿಲ್ಲೆಯ ಹಲವು ವಿವಿಧ ಬ್ಯಾಂಕ್ ಮ್ಯಾನೇಜರ್‌ಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಪ್ರಮುಖರು ಗುರುವಾರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿ ಸಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ, ಚಿಕ್ಕಬ್ಬಿಗೆರೆ ನಾಗರಾಜ್, ಆರ್. ಬಿ. ನಿಜಲಿಂಗಪ್ಪ, ಎಲ್.ಬಸವರಾಜಪ್ಪ, ಜಿ. ರಾಮರೆಡ್ಡಿ, ಮರ‌್ಲಹಳ್ಳಿ ರವಿಕುಮಾರ್, ಎಂ. ಸಿದ್ದಪ್ಪ ಹಳಿಯೂರು, ಹನುಮಂತರೆಡ್ಡಿ ಮತ್ತಿತರರು ಇದ್ದರು.