

ಬೆಟ್ಟದಪುರ: ಕೊಡಗು ಜಿಲ್ಲೆಯ ಕೂಡಿಗೆ ಕ್ರೀಡಾ ವಸತಿ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮೀಪದ ಹಾರನಹಳ್ಳಿ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದ 600 ಮೀಟರ್ ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಗುರುಪ್ರಸಾದ್ ಹಾಗೂ ಬಾಲಕಿಯರ ವಿಭಾಗದಲ್ಲಿ ನಯನಾ ಸುಪ್ರಿಯಾ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಇಬ್ಬರೂ ಕ್ರೀಡಾಪಟುಗಳನ್ನು ಶಾಲೆ ವತಿಯಿಂದ ಅಭಿನಂದಿಸಲಾಯಿತು. ದೈಹಿಕ ಶಿಕ್ಷಣ ಪರಿವಕ್ಷಕ ರಘುಪತಿ, ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಕೆ.ಸಿ ಸತೀಶ್, ಶಿಕ್ಷಕರಾದ ಲಕ್ಷ್ಮಣ್ ತಲ್ವಾರ್, ಹರೀಶ್, ಶಿವಪ್ಪ, ಚಂದ್ರಶೇಖರ್, ರಮೇಶ್, ಮಹದೇವ್ ಇದ್ದರು.