

ಭಾರತ ನರ್ಕಾರವು ಎಲ್ಲಾ ರಾಜ್ಯಗಳಲ್ಲಿನ ಜಿಲ್ಲಾ ಮಟ್ಟದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ (DWSM) ಸಮಿತಿಗಳನ್ನು ರಾಜ್ಯದ ಆಡಳಿತಾತ್ಮಕ ವ್ಯವಸ್ಥೆಗಳ ಆಧಾರದ ಮೇಲೆ ಪುನರ್ ರಚಿಸುವಂತೆ ತಿಳಿಸಲಾಗಿದ್ದು, ಸದರಿ ಸಮಿತಿಗೆ ಬದಲಾವಣೆ ಆಧಾರದ ಮೇಲೆ ಗ್ರಾಮ ಪಂಚಾಯತಿಗಳ 4 ಅಧ್ಯಕ್ಷರನ್ನು (ಕನಿಷ್ಠ 2 ಮಹಿಳಾ ಅಧ್ಯಕ್ಷರು) ಸೂಕ್ತ ಪ್ರಕ್ರಿಯೆ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಾಮ ನಿರ್ದೇಶನ ಮಾಡುವರು ಹಾಗೂ ನೀರು ನಿರ್ವಹಣೆ, ಸಮುದಾಯ ಆರೋಗ್ಯ, ಸಮುದಾಯ ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಸಹ ನಾಮ ನಿರ್ದೇಶನ ಮಾಡುವರು.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಅಸಕ್ತ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ನೀರು ನಿರ್ವಹಣೆ, ಸಮುದಾಯ ಆರೋಗ್ಯ, ಸಮುದಾಯ ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ನಲ್ಲಿಸಿರುವ ವ್ಯಕ್ತಿಗಳು ಕಾರ್ಯಪಾಲಕ ಅಭಿಯಂತರರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮೈಸೂರು ಇಲ್ಲಿ, ಅರ್ಜಿ ನಮೂನೆಯನ್ನು ಪಡೆದು ವಿವರಗಳನ್ನು ಭರ್ತಿ ಮಾಡಿ ಏಪ್ರಿಲ್ 24 ರ ಸಂಜೆ 5.30 ರೊಳಗಾಗಿ ಸಲ್ಲಿಸಬಹುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ಕಾರ್ಯಪಾಲಕ ಅಭಿಯಂತರರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.