ಜಿಂಕೆ ರಕ್ಷಿಸಿದ‌ ಯುವಕರು

Published on

ಗುಂಡ್ಲುಪೇಟೆ: ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ವೇಳೆ ನಾಯಿಗಳ ದಾಳಿಗೆ ಸಿಲುಕಿದ ಜಿಂಕೆಯನ್ನು ಚಿಕ್ಕತುಪ್ಪೂರು ಯುವಕರು ರಕ್ಷಣೆ ಮಾಡಿದರು.

ಬಂಡೀಪುರದ ಬಫರ್ ವಲಯದ ಅರಣ್ಯದಿಂದ ಆಹಾರ ಅರಸಿ ಹೊರಬಂದ ಜಿಂಕೆಯನ್ನು ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ.
ಕೂಡಲೇ ನಾಯಿಗಳನ್ನು ಓಡಿಸಿದ ಯುವಕರು ಜಿಂಕೆಯನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net