ಜಾಹೀರಾತು ನಂಬಿ ಹಣ ಕಳೆದುಕೊಂಡ ಮಹಿಳೆ

Crime Logo
Published on

ಪ್ರವಾಸ ಸಂಬಂಧ ಪೇಸ್‌ಬುಕ್‌ನ ಜಾಹೀರಾತು ನಂಬಿ ಸಿದ್ದಾರ್ಥ ಬಡಾವಣೆಯ ನಿವಾಸಿ ಸುವರ್ಣ 5.96 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಉತ್ತರ ಭಾರತ ಪ್ರವಾಸ ಸಂಬಂಧ ಜಾಹೀರಾತು ಗಮನಿಸಿ ಅಲ್ಲಿದ್ದ ಮೊಬೈಲ್ ನಂಬರ್ ಸಂಪರ್ಕಿಸಿದ್ದಾರೆ. ಕರೆ ಸ್ವೀಕರಿಸಿದ ವಂಚಕ ಪ್ರವಾಸದ ಬಗ್ಗೆ ಮಾಹಿತಿ ನೀಡಿದ್ದು, ಸುವರ್ಣ ಮತ್ತು ಅವರ ಸ್ನೇಹಿತರಿಂದ ಹಣವನ್ನು ಆನ್‌ಲೈನ್ ಮೂಲಕ ಪಡೆದುಕೊಂಡಿದ್ದಾರೆ. ಬಳಿಕ ಪ್ರವಾಸದ ಬಗ್ಗೆ ಮಾಹಿತಿ ನೀಡದೆ ಮೊಬೈಲ್ ನಂಬರ್ ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಸುವರ್ಣ ಅವರು ನೀಡಿದ ದೂರಿನ ಮೇರೆಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net