ಜಾನಪದದಲ್ಲಿದೆ ಸಮಸ್ಯೆಗಳಿಗೆ ಪರಿಹಾರ

26kdr5 janapada
ಚಿಕ್ಕನಲ್ಲೂರು ಗ್ರಾಮದಲ್ಲಿ ಅಲಂಕೃತಗೊಂಡ ಎತ್ತಿನಗಾಡಿಯ ಮೂಲಕ ಸಮ್ಮೇಳನಾಧ್ಯಕ್ಷ ಸಿ.ತಿಪ್ಪೇಶ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
Published on

ಕಡೂರು: ಜಾನಪದ ಸಂಸ್ಕೃತಿಯಲ್ಲಿ ಆಧುನಿಕ ಅವಿಷ್ಕಾರಗಳಿಗೂ ಮಿಗಿಲಾದ ಸಂಗತಿಗಳು ಅಡಗಿವೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಜಾನಪದದ ಶ್ರೀಮಂತಿಕೆ ಮರೆಯಾಗುತ್ತಿರುವುದು ವಿಪರ್ಯಾಸ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲೂಕಿನ ಚಿಕ್ಕನಲ್ಲೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ಸಮುದಾಯಭವನದಲ್ಲಿ ಸೋಮವಾರ ಕರ್ನಾಟಕ ಜಾನಪದ ಪರಿಷತ್‌ನ ತಾಲೂಕು ಘಟಕದಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ನಾಲ್ಕನೇ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಈ ಹಿಂದೆ ಜಾನಪದ ತವರೂರಾಗಿ ನೆಲೆ ನಿಂತಿದೆ. ಜಾನಪದ ಕಲೆ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿಯಾಗಿ ಉಳಿಯಬೇಕು. ಜೀವನಾನುಭವವನ್ನು ನೇರವಾಗಿ ನಮಗೆ ತಿಳಿಸುವ, ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಶಕ್ತಿ ಜಾನಪದದಲ್ಲಿದೆ. ಅದನ್ನು ಉಳಿಸಲು ಶ್ರಮಿಸುತ್ತಿರುವ ಪರಿಷತ್‌ನ ಕಾರ್ಯ ಶ್ಲಾಘನೀಯ. ಸಮ್ಮೇಳನಗಳು ಕೇವಲ ಸಾಹಿತ್ಯ ಸಂಸ್ಕೃತಿಗಷ್ಟೇ ಸೀಮಿತವಾಗದೆ ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ನಡೆಸುವ ವೇದಿಕೆಯಾಗಬೇಕಿದೆ ಎಂದರು.

ಕ್ಷೇತ್ರದ 115 ಕೆರೆ ತುಂಬಿಸುವ ಭದ್ರಾ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. 2ನೇ ಹಂತದ ಯೋಜನೆಗೆ 400 ಕೋಟಿ ರೂ. ಬಿಡುಗಡೆಯಾಗಿದೆ. ಚಿಕ್ಕನಲ್ಲೂರು ಕೆರೆಗೂ ನೀರು ಹರಿಸಲು ಶ್ರಮಿಸುತ್ತಿದ್ದೇನೆ. ತಾಲೂಕಿನಲ್ಲಿ ಶೀಘ್ರ ಗಾಮೆರ್ಂಟ್ಸ್ ್ಯಾಕ್ಟರಿ ಆರಂಭವಾಗಲಿದ್ದು 5 ಸಾವಿರ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ. ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಸದಾ ಗಮನಹರಿಸಲಾಗುತ್ತಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಮಾತನಾಡಿ, ನಮ್ಮ ಮೂಲ ಸಂಸ್ಕೃತಿಯಾದ ಜಾನಪದದ ಸೊಗಡನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಷತ್ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಜತೆಗೆ ಹೋಬಳಿ ಮಟ್ಟದಲ್ಲೂ ಜಾನಪದ ಕಲಾವಿದರಿಗೆ ಮನ್ನಣೆ ದೊರಕಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತುಕೊಡಲಾಗುತ್ತಿದೆ ಎಂದರು.

ಸೂರಿ ಶ್ರೀನಿವಾಸ್ ಜಾನಪದ ವಸ್ತು ಪ್ರದರ್ಶನ ಉದ್ಘಾಟಿಸಿದರು. ಹಿರಿಯ ಜಾನಪದ ಕಲಾವಿದರಾದ ಡಾ.ಮಾಳೆನಹಳ್ಳಿ ಬಸಪ್ಪ, ಮುಗುಳಿ ಲಕ್ಷ್ಮೀದೇವಮ್ಮ, ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಕೋಶಾಧ್ಯಕ್ಷ ಪ್ರಕಾಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಚಿಂತಕ ಚಟ್ನಳ್ಳಿ ಮಹೇಶ್, ನಿವೃತ್ತ ಶಿಕ್ಷಕ ರಾಜಪ್ಪ, ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್, ಹೋಬಳಿ ಅಧ್ಯಕ್ಷ ಜಯಣ್ಣ, ರಾಜು, ಪ್ರಕಾಶ, ಪರಮೇಶ್ವರಪ್ಪ, ರೇವಣಸಿದ್ದಪ್ಪ, ಸೋಮು, ಚಂದ್ರು, ಕಲ್ಲಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net