

ಜವಾಹರ ನವೋದಯ ವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿಗಾಗಿ ಪ್ರವೇಶ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.
2026 - 27ನೇ ಶೈಕ್ಷಣಿಕ ವರ್ಷಕ್ಕಾಗಿ 6 ನೇ ತರಗತಿಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು 2025 -26 ನೇ ಸಾಲಿನಲ್ಲಿ 5 ನೇ ತರಗತಿಯಲ್ಲಿ ಸರ್ಕಾರಿ/ ಅನುದಾನಿತ/ ಸರ್ಕಾರದ ಅನುಮತಿ/ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಮತ್ತು ಮೈಸೂರು ಜಿಲ್ಲೆಯಲ್ಲಿ ಅಧ್ಯಯನ ಮಾಡುತ್ತಿರಬೇಕು. 01-05-2014 ರಿಂದ 31-07-2016 ರೊಳಗೆ ಜನಿಸರಬೇಕು ಮತ್ತು ಮೈಸೂರು ಜಿಲ್ಲೆಯ ನಿವಾಸಿಯಾಗಿರಬೇಕು.
ಆನ್‌ಲೈನ್ ಮೂಲಕ ಅರ್ಜಿಗಳನ್ನು www.navodaya.gov.in ಸಲ್ಲಿಸಬಹುದು. 5 ನೇ ತರಗತಿಯಲ್ಲಿ ಅಧ್ಯಯನ ಮಾಡಿರುವ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರಮಾಣ ಪತ್ರ, ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ಪಾಲಕ ಅಥವಾ ಪೋಷಕರ ಸಹಿ, ವಿದ್ಯಾರ್ಥಿಯ ಸಹಿ, ಮೈಸೂರು ಜಿಲ್ಲೆಯ ವಾಸ ಸ್ಥಳದ ಆಧಾರ್ ಸಂಖ್ಯೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನಾಂಕವಾಗಿದ್ದು, ಪರೀಕ್ಷೆಯನ್ನು ಡಿಸೆಂಬರ್ 13 ರಂದು ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.navodaya.gov.in ಹಾಗೂ ದೂ. ಸಂ: 0821-2970040 ನ್ನು ಸಂಪರ್ಕಿಸಬಹುದು ಎಂದು ಜವಹಾರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.