ಜಲ ಮೂಲಗಳ ಸಂರಕ್ಷಣೆಗೆ ಮುಂದಾಗೋಣ

26kkr-1(11-24
Published on

 ಕಿಕ್ಕೇರಿ : ಜಲ ಮೂಲಗಳ ಸಂರಕ್ಷಣೆಗೆ ಮುಂದಾಗೋಣ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಂ ನೆಲ್ಲಿತಾಯ ತಿಳಿಸಿದರು. ಸಮೀಪಪದ ಕರೋಟಿ - ಹೆಗ್ಗಡಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುನಶ್ಚೇತನಗೊಂಡ 743ನೇ ಕೆರೆಯ ನಾಮಫಲಕ ಅನಾವರಣಗೊಳಿಸಿದ ನಂತರ ಕೆರೆಯನ್ನು ಗ್ರಾಪಂಗೆ ಹಸ್ತಾಂತರಿಸಿ ಅವರು ಮಾತನಾಡಿದರು. ರೈತರ ಜೀವನಾಡಿಯಾಗಿರುವ ಕೆರೆಗಳನ್ನು ಉಳಿಸಿಕೊಂಡರೆ ಅಂತರ್ಜಲ ವೃದ್ಧಿಯಾಗಿ ಸಮೃದ್ಧಿ ನೆಲೆಸುತ್ತದೆ. ಈ ಕೆರೆಗೆ 11.62 ಲಕ್ಷ ರೂ. ಖರ್ಚಾಗಿದೆ. ಹೂಳು, ಗೋಡು ಮಣ್ಣು ಸಾಗಾಟಕ್ಕೆ ಗ್ರ್ರಾಮಸ್ಥರು 10.13 ಲಕ್ಷ ರೂ. ಪಾಲು ನೀಡಿದ್ದಾರೆ ಎಂದರು.

ಕೆರೆಯನ್ನು ಸುಂದರವಾಗಿ ಮರು ನಿರ್ಮಾಣ ಮಾಡಲಾಗಿದೆ. ಇಲ್ಲಿ ಜನ, ಜಾನುವಾರುಗಳು, ಪ್ರಾಣಿ-ಪಕ್ಷಿಗಳು ಸಮೃದ್ಧವಾಗಿ ನೀರು ಕುಡಿಯಬಹುದಾಗಿದೆ. ಕೆರೆ ಅಭಿವೃದ್ಧಿಗೊಂಡ ಕಾರಣ ಸುತ್ತಮುತ್ತಲಿನ ಕೃಷಿ ಜಮೀನು ಸಮೃದ್ಧ ಫಸಲು ನೀಡುತ್ತದೆ ಎಂದರು. ಕೆರೆಯನ್ನು ಸ್ವಚ್ಛವಾಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ಪಿಡಿಒ ಶೈಲಜಾ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣೆಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯರಾಮ್ ತೋಟಿ, ನಿರ್ದೇಶಕ ಕೇಶವ ದೇವಾಂಗ, ಮೈಸೂರು ಪ್ರಾದೇಶಿಕ ಕಚೇರಿ ಕೆರೆ ಅಭಿವೃದ್ಧಿ ಇಂಜಿನಿಯರ್ ಪುಷ್ಪರಾಜ್, ತಾಲೂಕು ಯೋಜನಾಧಿಕಾರಿ ವೀರೇಶಪ್ಪ, ಜ್ಞಾನವಿಕಾಸ ವಲಯ ಮೇಲ್ವಿಚಾರಕಿ ನೇತ್ರಾವತಿ, ಕೃಷಿ ಮೇಲ್ವಿಚಾರಕ ಪ್ರವೀಣ್, ಮುಖಂಡರಾದ ಕ್ಷೇತ್ರಪಾಲೇಗೌಡ, ಸುರೇಶ, ಸೇವಾ ಪ್ರತಿನಿಧಿಗಳಾದ ಜಯಲಕ್ಷ್ಮೀ , ಶೋಭಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net