ಜಯಶ್ರೀ ಬಾಬರ್ ಮಿಸ್ ಹುಬ್ಬಳ್ಳಿ

h27-Sudhisha 1
Published on

ಹುಬ್ಬಳ್ಳಿ: ಧಾರವಾಡದ ಸುದಿಶಾ ಇವೆಂಟ್ಸ್ ವತಿಯಿಂದ ‘ಮಿಸ್ ಹುಬ್ಬಳ್ಳಿ 2020’ ಆನ್ಲೈನ್ ಸ್ಪರ್ಧೆ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಮಿಸ್ ಹುಬ್ಬಳ್ಳಿ ಆಗಿ ಜಯಶ್ರೀ ಬಾಬರ್, ಪ್ರಥಮ ರನ್ನರ್ ಅಪ್ ಸೌಮ್ಯಾ ಜಿ.ನಾಗಶೆಟ್ಟಿ, ದ್ವಿತೀಯ ರನ್ನರ್ ಅಪ್ ಲಕ್ಷ್ಮೀ ಹುಂಡೇಕರ, ಮೂರನೇ ರನ್ನರ್ ಅಪ್ ಆಗಿ ಪ್ರಿಯಾಂಕಾ ಕರ್ಜಗಿಮಠ ಆಯ್ಕೆಯಾದರು ಎಂದು ತೀರ್ಪಗಾರರಾದ ಮಾರ್ತಾಂಡಪ್ಪ ಕತ್ತಿ ಹಾಗೂ ಸೃಷ್ಟಿ ನವೀನ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಡ್ ಮಾಡೆಲ್ ಇಂಡಿಯಾ ಮತ್ತು ಲಿಟಲ್ ಪ್ರಿನ್ಸೆಸ್ ಕರ್ನಾಟಕದ ಋತು ಸಜ್ಜನ ಗೆದ್ದವರಿಗೆ ಕಿರೀಟ ತೊಡಿಸಿದರು. ಲಾಕ್​ಡೌನ್ ವೇಳೆ ರಂಗೋಲಿ, ಮೇಕ್​ಅಪ್, ಕಿಚನ್, ಕರಕುಶಲ, ಗೋ ಗ್ರೀನ್ ಸಾರಿ, ಮೈ ಫ್ಯಾಮಿಲಿ ಬೆಸ್ಟ್ ಫ್ಯಾಮಿಲಿ ಇನ್ ದಿ ವರ್ಲ್ಡ್ ಸೇರಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದರು. ಇವೆಂಟ್ಸ್​ನ ಮುಖ್ಯಸ್ಥ ರಾಘವೇಂದ್ರ ಕುಂದಗೋಳ, ಚಂದ್ರಿಕಾ ಕರವೀರಮಠ, ಅಶೋಕ ಬಾಬರ್, ಶೋಭಾ ಸಜ್ಜನ, ಹೀನಾ ರಿಯಾಜ್ ಜಮಖಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net