ಜಮೀರ್ ಗಡಿಪಾರಿಗೆ ವಿಜಯೇಂದ್ರ ಆಗ್ರಹ

Vijayendra
Published on

ಚಿತ್ರದುರ್ಗ: ವಕ್ಫ್ ಬೋರ್ಡ್ ಮುಂದಿಟ್ಟುಕೊಂಡು ಹಿಂದು ರೈತರ ಜಮೀನು ಕಬಳಿಸಲು ಸಚಿವ ಜಮೀರ್ ಅಹಮದ್ ಖಾನ್ ಸಂಚು ಸೃಷ್ಟಿಸಿದ್ದು, ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಕೂಡಲೇ ಗಡಿಪಾರು ಮಾಡಿದರೆ, ನಾಡಿಗೆ ಒಳಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ಆಸ್ತಿ ಹೆಸರಿನಲ್ಲಿ ಮತ್ತೊಂದೆಡೆ ರಾಜ್ಯದ ದೇಗುಲ ಹಾಗೂ ಮಠಮಾನ್ಯಗಳ ಜಾಗ ಕಿತ್ತುಕೊಳ್ಳಲು ಕುತಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗೊಂದಲ ಸೃಷ್ಟಿಸಿದ್ದು, ತಾಕತ್ತು ಇದ್ದರೆ, ಗೆಜೆಟ್ ನೋಟಿಫಿಕೇಷನ್ ಹಿಂಪಡೆದು ಮೊದಲು ರದ್ದುಗೊಳಿಸಲಿ. ಸರ್ಕಾರ ಅದಕ್ಕೆ ಮುಂದಾಗಿಲ್ಲ. ಹೀಗಾಗಿ ಉಪ ಚುನಾವಣೆ ಬಳಿಕ ನೋಟಿಸ್ ಕೊಟ್ಟು ರೈತರಿಗೆ ಅನ್ಯಾಯ ಮಾಡಲಿದೆ ಎಂದು ದೂರಿದರು.

ಜಮೀರ್ ಮಾಡುತ್ತಿರುವ ಕೆಲಸ ಜನತೆಗೆ ಗೊತ್ತಾಗಿದೆ. ಗೂಂಡಾ ವರ್ತನೆಯಿಂದ ಅಧಿಕಾರಿಗಳ ಮೇಲೆ ದಬ್ಬಾಳಿಗೆ ಮಾಡಿ ಜಮೀನು ಕಬಳಿಸಲು ಮುಂದಾಗಿದ್ದಾರೆ. ಭೂ ಕಬಳಿಕೆ ವಿರುದ್ಧ ಬಿಜೆಪಿ ಹೋರಾಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net