ಜನಸಾಮಾನ್ಯರ ಜೀವಾಳ ಜಾನಪದ

3
Published on

ಜಾನಪದ ಜನ ಸಾಮಾನ್ಯರ ಜೀವಾಳಾವಾಗಿದೆ ಎಂದು ಮೈಸೂರು ವಿವಿ ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೇಶವ ಶರ್ಮ ಹೇಳಿದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕನ್ನಡ ಜನಪದ ಮಹಾಕಾವ್ಯಗಳ ಸಂಕಥನಗಳು’ ಕುರಿತು ಉಪನ್ಯಾಸ ನೀಡಿದರು.

ಕಲೆಗೆ ಸಾವಿಲ್ಲ. ಜಾನಪದ ಜನರಿಂದ ಜನರಿಗಾಗಿ ಹರಿದುಬಂದ ಮೌಖಿಕ ಕಲಾ ಸಂಸ್ಕೃತಿಯಾಗಿದೆ. ಶ್ರಮದ ಬದುಕಿಗೆ ಆಸರೆಯಾಗಿದೆ. ಹಾಸ್ಯ ಹುಟ್ಟಿಸುವುದರ ಮೂಲಕ ಜೀವನದಲ್ಲಿನ ನೋವನ್ನು ಮರೆಯಲು ಸಹಕಾರಿಯಾಗಿದೆ ಎಂದರು.

ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಜನಪದ ಕಾವ್ಯಗಳು ಇಂದಿಗೂ ಜೀವಂತವಾಗಿವೆ ಎಂದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ , ಪ್ರಾಧ್ಯಾಪಕಿ ಪ್ರೊ.ಎಸ್.ವಿಜಯ ಕುಮಾರಿ ಕರಿಕಲ್ ಉಪನ್ಯಾಸಕ ಎಂ.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net