ಜನರನ್ನು ಡೈವರ್ಟ್ ಮಾಡುತ್ತಿರುವ ಸಿಎಂ

Siddaramaiah
Published on

ರಾಜ್ಯದಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರ ವಿರೋಧದಿಂದಾಗಿ ಮರು ಜಾತಿಗಣತಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಟಿ.ಎಸ್.ಶ್ರೀವತ್ಸ, ಹಳೇ ಜಾತಿ ಗಣತಿ ಸರ್ವೇಯಿಂದ ನೂರಾರು ಕೋಟಿ ಹಣ ಪೋಲಾಗಿದೆ. ಜನರನ್ನು ಡೈವರ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ಲಿಂಗಾಯತರು, ಒಕ್ಕಲಿಗರು ಜಾತಿ ಗಣತಿಗೆ ಒಪ್ಪಿರಲಿಲ್ಲ. 10 ವರ್ಷ ಹಳೆಯ ಜಾತಿಗಣತಿ ಇದು, ಹಾಗಾಗಿ ಅಂಕಿ ಅಂಶಗಳು ಸರಿಯಿಲ್ಲ ಎಂದು ಹೇಳಿದ್ದೆವು. ಆದರೆ ನಾವು ಇದೇ ಜಾತಿಗಣತಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಎಂಬ ಕಾರಣಕ್ಕೆ ಮತ್ತೊಮ್ಮೆ ಜಾತಿಗಣತಿ ಮಾಡಲು ಹೊರಟಿದ್ದಾರೆ. ಇದಕ್ಕೆ ಹಣ ಎಲ್ಲಿಂದ ತರುತ್ತಾರೆ? ಮ್ಯಾನ್ ಪವರ್ ಎಲ್ಲಿಂದ ಮಾಡುತ್ತಾರೆ? ರಾಜ್ಯದ ಜನರಲ್ಲಿ ಗೊಂದಲ ಮೂಡಿಸಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net