ಜನಮನ ಸೆಳೆದ ಮಹಿಳಾ ಬೈಕ್​ ರ್ಯಾಲಿ

6
Published on

ಚನ್ನಮ್ಮನ ಕಿತ್ತೂರು: ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಅಂಗವಾಗಿ ಭಾನುವಾರ ಉತ್ತರ ಕರ್ನಾಟಕದ ಶೆಲಿ ಉಡುಪು ತೊಟ್ಟು ಮಹಿಳೆಯರು ಬೆಕ್​ ರ್ಯಾಲಿ ಮಾಡಿ ಎಲ್ಲರ ಗಮನ ಸೆಳೆದರು.
ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಮಹಿಳಾ ಬೆಕ್​ ರ್ಯಾಲಿ ಪಟ್ಟಣದ ಸಮೀಪದ ಹುಲಿಕಟ್ಟಿ ಮೊರಾರ್ಜಿ ವಸತಿ ಶಾಲೆಯಿಂದ ಹೆದ್ದಾರಿ ಮೂಲಕ ಚನ್ನಮ್ಮ ಪರ ಜೊಷಗಳನ್ನು ಕೂಗುತ್ತ ಪಟ್ಟಣದ ಚನ್ನಮ್ಮ ವೃತಕ್ಕೆ ಬಂದು ಸೇರಿತು.
ದಾರಿಯುದ್ದಕ್ಕೂ ಕೇಳಿ ಬಂದ ಹರ ಹರ ಮಹಾದೇವ ೂಷಣೆ ನೋಡುಗರ ಮನ ತಟ್ಟಿ ಕಿತ್ತೂರು ಸ್ವಾತಂತ್ರ$್ಯದ ಕಿಚ್ಚನ್ನು ಹೆಚ್ಚಿಸಿತು. ಜಿಪಂ ಮಾಜಿ ಸದಸ್ಯೆ ಹಾಗೂ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ನೇತತ್ವದಲ್ಲಿ ರಾಣಿ ಚನ್ನಮ್ಮ ಹಾಗೂ ವೀರರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಯಿತು.
ರ್ಯಾಲಿಯಲ್ಲಿ ಉತ್ತರ ಕರ್ನಾಟಕ ಸಂಸತಿಯ ಉಡುಪು ಧರಿಸಿ,
ತಲೆಗೆ ಪೇಟಾ, ಮೂಗುತಿ, ಕೆಬಳೆ ಹಾಗೂ ಆಭರಣಗಳನ್ನು ಧರಿಸಿ ಸಿಂಗಾರಗೊಂಡಿದ್ದ ಮಹಿಳೆಯರು ಎಲ್ಲರ ಮನ ಸೆಳೆದರು.
ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಪ್ರವಾಸೋದ್ಯಮ ಜಂಟಿ ನಿರ್ದೇಶಕಿ ಸೌಮ್ಯಾ ಬಾಪಟ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ ಸೇರಿ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಶಿಕಿಯರು, ಯುವತಿಯರು, ನೂರಾರು ಮಹಿಳೆಯರಿಂದ ಬಹತ್​ ಬೆಕ್​ ರ್ಯಾಲಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net