ಜನಮನ ಸೆಳೆದ ಗಾಯನ ಸ್ಪರ್ಧೆ

19 TKE 1 sangeetha
ತರೀಕೆರೆ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಹೊಂಗನಸು ಗಾನಕೋಗಿಲೆ ಸಮಾಗಮ ಸೀಸನ್-2 ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಗಾಯಕರು.
Published on

ತರೀಕೆರೆ: ಹೊಂಗನಸು ಗಾನಕೋಗಿಲೆ ಸಮಾಗಮ ತಂಡದಿಂದ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಸೀಸನ್-2 ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ತರೀಕೆರೆ, ದಾವಣಗೆರೆ, ಬೆಂಗಳೂರು, ಶಿವಮೊಗ್ಗ, ನರಗುಂದ, ಕಡೂರು, ಭದ್ರಾವತಿ, ಬೀರೂರು ಇತರ ಕಡೆಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಸ್ಪರ್ಧಿಗಳು ಸೊಗಸಾದ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು. ಸೋಲೋ, ಡ್ಯುಯಟ್ ಇತರ ಪ್ರಕಾರಗಳ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೆಲ ಗಾಯಕರು ಸಂಗೀತ ಪ್ರೇಮಿಗಳಿಂದ ಪ್ರಶಂಸೆ ಪಡೆದುಕೊಂಡರೆ, ಮತ್ತೆ ಕೆಲವರು ಸ್ಪರ್ಧೆಯಲ್ಲಿ ವಿಜೇತರಾಗಿ ಸ್ಮರಣಿಕೆ, ಪ್ರಶಸ್ತಿ ಪತ್ರ ಪಡೆದರು.

ಹೊಂಗನಸು ಗಾನಕೋಗಿಲೆ ಸೀಸನ್-2 ಸ್ಪರ್ಧೆಯ ಆಯೋಜಕಿ ಮುನಿರತ್ನ ಮಾತನಾಡಿ, ಪ್ರಶಸ್ತಿ, ಪುರಸ್ಕಾರಗಳ ಹೊರತಾಗಿಯೂ ಪ್ರತಿನಿತ್ಯ ಕೆಲಸ ಕಾರ್ಯದಲ್ಲಿ ತೊಡಗಿಕೊಂಡವರ ಒತ್ತಡ ನಿವಾರಣೆಗಾಗಿ ಗಾಯನ ಸ್ಪರ್ಧೆ ಏರ್ಪಡಿಸಲಾಗಿದ್ದು, ಇಂಥ ಕಾರ್ಯಕ್ರಮ ಎರಡು ತಿಂಗಳಿಗೊಮ್ಮೆ ಆಯೋಜನೆಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಹೊಂಗನಸು ಗಾನಕೋಗಿಲೆ ಸಮಾಗಮ ತಂಡದ ಸದಸ್ಯರಾದ ಡಾ. ದೇವರಾಜ್, ಡಾ. ಪ್ರದೀಪ್‌ಕುಮಾರ್, ಕಲ್ಯಾಣ್‌ಕುಮಾರ್, ವಿರೂಪಾಕ್ಷಪ್ಪ, ರಾಧಾ, ವೀಣಾ, ರಾಘವೇಂದ್ರ, ಕಲೈಮಣಿ, ಶೋಭಾ, ಗೀತಾ ಹಸ್ಮಕಲ್, ಗಿರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net