ಜನಪದ ಸಂಗೀತ ಕಾರ್ಯಕ್ರಮ ನಾಳೆ

Music _1
Published on

ಮೈಸೂರು: ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜ.30ರಂದು ರಾತ್ರಿ 9 ಗಂಟೆಗೆ ‘ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗ’ದ ವತಿಯಿಂದ ‘ಜಾನಪದವೇ ಸತ್ಯ ಜಾನಪದವೇ ನಿತ್ಯ’ ಎಂಬ ಜನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗಾಯಕರಾದ ಡಾ.ಕಾ.ರಾಮೇಶ್ವರಪ್ಪ, ರಶ್ಮಿ, ಬಿ.ಬಸವರಾಜ್, ನಟರಾಜ್ ಹರದನಹಳ್ಳಿ, ರವಿರಾಜ್ ಹಾಸು, ಅರುಣ್ ಕುಮಾರ್, ಸ್ಪಂದನ ರಾಮೇಶ್ವರ್, ಮಾನಸ, ಉಮೇಶ್, ವಿಕಾಸ್, ಕಿಶೋರ್ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ಪುರುಷೋತ್ತಮ್(ಕೀಬೋರ್ಡ್), ಪುನೀತ್ (ಕೊಳಲು), ಮಹದೆವ್(ತಬಲಾ), ಭೀಮಾಶಂಕರ್(ತಬಲಾ), ಗುರುದತ್ (ರಿದಂ), ಗುರುಸಿದ್ದಪ್ಪ (ಘಟಂ) ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net