ವಿಜಯವಾಣಿ ಸುದ್ದಿಜಾಲ ಕೋಲಾರ
ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರವು ಒಳ್ಳೆಯದು. ದೇಶದಲ್ಲಿ ಯಾವ ಯಾವ ಸಮುದಾಯಗಳ ಜನಸಂಖ್ಯೆ ಎಷ್ಟಿದೆ ಇದೆ ಎಂಬುದು ತಿಳಿದುಕೊಂಡರೇ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಶಾಸಕ ಕೊತ್ತೂರು ಮಂಜುನಾಥ್ ಸ್ವಾಗತಿಸಿದರು.
ನಗರದ ತಮ್ಮ ಶಾಸಕರ ಕಛೇರಿಯಲ್ಲಿ ಶನಿವಾರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಒಳ್ಳೆಯ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ಶ್ಲಾಘನೀಯ. ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರವರ ಅವಧಿಯಲ್ಲಿ ಜಾತಿಗಣತಿ ಮಾಡಿದ್ದರು. ಈಗ ಮತ್ತೊಮ್ಮೆ ಜಾತಿಗಣತಿಗೆ ಮುಂದಾಗಿದ್ದಾರೆ. ಹತ್ತು ವರ್ಷಕ್ಕೊಮ್ಮೆ ಜಾತಿಗಣತಿ ಮಾಡುವುದು ಉತ್ತಮ ನಿರ್ಧಾರವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ವೈಫಲ್ಯ :
ಪಹಲ್ಗಾಮದಲ್ಲಿ ನಡೆದ ಭಯೋತ್ಪಾದಕ ಧಾಳಿಯಲ್ಲಿ ಸತ್ತವರು ನಮ್ಮ ಅಣ್ಣ ತಮ್ಮಂದಿರು, ಇದು ತುಂಬಾ ಘೋರವಾದ ವಿಚಾರ ಭಯೋತ್ಪಾದಕರು ದಾಳಿ ನಡೆಸಿ ಇಷ್ಟು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಮಂಜಸವಲ್ಲ, ಹಾಗಾಗಿ ಕೆಂದ್ರ ಸರ್ಕಾರ ಮೊದಲು ರಾಜಿನಾಮೆ ನೀಡುವುದು ಸೂಕ್ತ, ಸುಮ್ಮನೆ ಯುದ್ದ ವಿಮಾನಗಳನ್ನು ಆಕಾಶದಲ್ಲಿ ಚಾಲನೆ ಮಾಡಿಕೊಂಡು ದೇಶದ ಜನತೆಗೆ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ ಅಷ್ಟೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.
ನಮ್ಮ ಜಾಗದಲ್ಲಿ ಬಂದು ಭಯೋತ್ಪಾದಕರು ನಮ್ಮ ಜನರ ಮೇಲೆ ದಾಳಿ ನಡೆಸಿ, ಅಮಾಯಕ ೨೬ ಜನರನ್ನು ಬಲಿತೆಗೆದುಕೊಂಡರೂ ಕೇಂದ್ರ ಸರ್ಕಾರ ಈವರೆಗೂ ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳದಿರುವುದು ಅವರಿಗೆ ಶೋಭೆ ತರುವುದಿಲ್ಲ. ಭಯೋತ್ಪಾದಕರು ದಾಳಿ ನಡೆಸಿದ ತಕ್ಷಣ ಎಚ್ಚೆತ್ತುಕೊಂಡಿದ್ದರೆ, ಅವರು ನಮ್ಮ ಸ್ಥಳದ ಒಳಗೆ ಸಿಗುತ್ತಿದ್ದರು. ಭಯೋತ್ಪದಕರ ದಾಳಿ ಕೇಂದ್ರ ಸರ್ಕಾರ ಗುಪ್ತಚರ ಇಲಾಖೆಯ ಲೋಪ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದರು.
ಭಯೋತ್ಪಾದಕರ ದಾಳಿ ನಡೆಸಿದ ತಕ್ಷಣ ಕೇಂದ್ರ ಸರ್ಕಾರ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿಯ ನೀರನ್ನು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅದು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ ಸಿಂಧೂ ನದಿ ನೀರನ್ನು ನಿಲ್ಲಿಸಲು ಬೃಹತ್ ಅಣೆಕಟ್ಟು ಕಟ್ಟಬೇಕು. ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಬೇರೊಂದು ಕಡೆ ಹರಿಸಲು ಕೋಟ್ಯಾಂತರ ರೂ.ಗಳ ಅನುಧಾನ ಬೇಕು. ಇದೆಲ್ಲಾ ಕೇಂದ್ರ ಸರ್ಕಾರದ ಗಿಮಿಕ್ ಹಾಗಿದೆ. ದೇಶದ ಜನರನ್ನು ನಾವು ಸಿಂಧೂ ನದಿಯ ನೀರನ್ನು ನಿಲ್ಲಿಸಿದ್ದೇವೆ ಎಂದು ದೇಶದ ಜನರನ್ನು ಯಾಮಾರಿಸುತ್ತಿದ್ದಾರೆ. ದೇಶದಿಂದ ಪಾಕಿಸ್ತಾನಕ್ಕೆ ರಪ್ತು ಆಗುವ ಔಷಧಿಗಳನ್ನು ನಿಲ್ಲಿಸಿದ್ದಲ್ಲಿ ಪಾಕಿಸ್ತಾನದಲ್ಲಿರುವ ಅರ್ಥದಷ್ಟು ಜನ ಮೂರು ದಿನದಲ್ಲಿ ಸಾಯುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.
ಕೋಲಾರ ನಗರಸಭೆಯ ಅಧಿಕಾರಿಗಳು ಎತ್ತಂಗಡಿ?
ನಗರಸಭೆಯಲ್ಲಿ ಕೆಲ ಅಧಿಕಾರಿಗಳು ಕಳೆದ ಹತ್ತುವರ್ಷಗಳಿಂದ ಇಲ್ಲಿಯೇ ಬೇರೂರಿದ್ದು, ಸಾಕಷ್ಟು ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ. ಅವರನ್ನೆಲ್ಲಾ ಬೇರೋಂದು ಜಿಲ್ಲೆಗೆ ವರ್ಗಾವಣೆ ಮಾಡಿ, ಅಲ್ಲಿರುವವರನ್ನು ಕೋಲಾರಕ್ಕೆ ತರಬೇಕು ಎಂಬ ಪ್ರಯತ್ನಗಳು ನಡೆಯುತ್ತಿವೆ. ಆದರೆ ಕೋಲಾರ ನಗರಸಭೆಗೆ ಅಧಿಕಾರಿಗಳು ಬರಲು ಮುಂದಾಗುತ್ತಿಲ್ಲ. ಉತ್ತಮವಾಗಿ ಜನರಿಗೆ ಸ್ಪಂದಿಸುವ ಅಧಿಕಾರಿಗಳು ಕೋಲಾರ ನಗರಸಭೆಗೆ ಬಂದರೆ ಅವರಿಗೆ ಸ್ವಾಗತಿಸಿ ಸಂಪೂರ್ಣ ಸಹಕಾರ ನೀಡುವುದಲ್ಲದೆ ಬರುವ ಅಂತಹ ಅಧಿಕಾರಿಗೆ ಉಚಿತವಾಗಿ ಒಂದು ದ್ವಿಚಕ್ರ ವಾಹನವನ್ನು ನೀಡಲಾಗುವುದು ಎಂದು ತಿಳಿಸಿದರು.
ಖಾದ್ರಿಪುರದಲ್ಲಿ ನಗರಸಭೆಗೆ ಸೇರಿದ ಜಾಗವನ್ನು ನಗರಸಭೆಗೆ ಸುರ್ಪದಿಗೆ ಪಡೆಯಲು ಈಗಾಗಲೆ ಕ್ರಮ ವಹಿಸಲಾಗಿದೆ. ಕೋಲಾರ ತಹಶೀಲ್ದಾರ್, ಹಾಗೂ ಉಪವಿಭಾಗಾಧಿಕಾರಿಗೆ ಸೂಚನೆ ನೀಡಲಾಗಿದೆ. ಅತಿ ಶೀಘ್ರದಲ್ಲೇ ದಾಖಲೆಗಳನ್ನು ತಿರುಚಿ ನಗರಸಭೆ ಆಸ್ತಿಯನ್ನು ಕಬಳಿಸಿರುವವರಿಂದ ನಗರಸಭೆ ಆಸ್ತಿಯಾಗಿ ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಪೋಲಿಸರ ವಿರುದ್ಧ ಅಸಮಾಧಾನ :
ಮುಳಬಾಗಿಲು ಅಲ್ಲದೆ ಕೋಲಾರದಲ್ಲೂ ಐಪಿಎಲ್ ಬೆಟ್ಟಿಂಗ್ ದಂದೆ ನಡೆಯುತ್ತಿದೆ. ಬೆಟ್ಟಿಂಗ್ ದಂದೆಯಿAದ ಎಷ್ಟೋ ಅಮಾಯಕ ಯುವಕರು ಬಲಿಯಾಗಿದ್ದಾರೆ. ಎಷ್ಟೋ ಕುಟುಂಬಗಳು ಸಹ ಬೀದಿಗೆ ಬಿದ್ದಿವೆ. ಬೆಟ್ಟಿಂಗ್ ದಂದೆಯಿAದ ದ್ವಿಚಕ್ರ ವಾಹನ ಮನೆ ಮಟ ಮಾರಿಕೊಂಡಿರುವ ಉದಾಹರಣೆಗಳೂ ಇವೆ. ಬೆಟ್ಟಿಂಗ್ ದಂದೆ ಕುರಿತು ಇಂಚಿAಚು ಮಾಹಿತಿ ಪೋಲೀಸರಿಗೆ ಗೊತ್ತಿದೆ. ಆದರೆ ಪೋಲೀಸರೆ ಅವರನ್ನು ಬಿಟ್ಟುಬಿಟ್ಟಿದ್ದಾರೆ ಪೋಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕುಡಾ ಅಧ್ಯಕ್ಷ ಮಹಮದ್ ಹನೀಫ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮುಖಂಡರಾದ ಕಠಾರಿಪಾಳ್ಯ ಅಮರ್, ಜಂಬಾಪುರ ವೆಂಕಟರಾಮ್, ಉರಟ ಅಗ್ರಹಾರ ಚೌಡರೆಡ್ಡಿ, ತಿಪ್ಪೇನಹಳ್ಳಿ ನಾಗೇಶ್, ಚಿನ್ನಾಪುರ ನಾರಾಯಣಸ್ವಾಮಿ, ಸಿಎಂಎA ಮಂಜುನಾಥ್, ಸೈಫ್, ಮುಂತಾದವರು ಇದ್ದರು.
ಚಿತ್ರ ೦೩ ಕೆ.ಎಲ್.ಆರ್. ೦೧ : ಶಾಸಕ ಕೊತ್ತೂರು ಮಂಜುನಾಥ್ ನಗರದ ತಮ್ಮ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುತ್ತಿರುವುದು.