ಜನಕ್ಕೆ ಭೂಮಿ ಕೊಡಲಿಕ್ಕೆ ಅವಕಾಶವೇ ಇಲ್ಲವಾಗಿದೆ / ದರ್ಖಾಸ್ತು ಸಮಿತಿ ಇದ್ದು ಪ್ರಯೋಜನವಿಲ್ಲವಾಗಿದೆ / ಕೊತ್ತೂರು ಮಂಜುನಾಥ್ ಬೇಸರ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ವಿಧಾನಸಭಾ ಕ್ಷೇತ್ರದ ಕೋಲಾರ ನಗರಸಭೆ ಮತ್ತು ವೇಮಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಂಜೂರಾತಿಗೆ ಅವಕಾಶವಿಲ್ಲ. ಬೇರೆಕಡೆ ಕೊಡಲು ಜಮೀನೂ ಇಲ್ಲ. ಜಮೀನು ಮಂಜೂರು ಮಾಡಲು ಬಹಳಷ್ಟು ನಿರ್ಬಂಧಗಳಿರುವುದರಿAದ ದರ್ಖಾಸ್ತು ಸಮಿತಿ ಇದ್ದು ಏನು ಪ್ರಯೋಜನ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಪ್ರಶ್ನಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ದರ್ಖಾಸ್ತು ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆಯ ೫ ಕಿ.ಮೀ ವ್ಯಾಪ್ತಿ ಹಾಗೂ ಪಟ್ಟಣ ಪಂಚಾಯಿತಿಯ ೩ ಕಿ.ಮೀ ವ್ಯಾಪ್ತಿಯಲ್ಲಿ ಭೂಮಂಜೂರಾತಿ ಮಾಡುವಂತಿಲ್ಲ ಎಂಬ ಕಾನೂನು ಇದೆ. ಆದರೆ ರೈತರು ಪಟ್ಟಣ ಪಂಚಾಯಿತಿ ರೂಪುಗೊಳ್ಳುವ ಮುನ್ನವೇ ಮಂಜೂರಾತಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಅರ್ಜಿಗಳನ್ನು ವಿಲೇವಾರಿ ಮಾಡಿ ಪಟ್ಟಣ ಪಂಚಾಯಿತಿ ರೂಪಿಸಬೇಕಿತ್ತು. ಈ ವಿಚಾರದ ಬಗ್ಗೆ ಕಂದಾಯ ಸಚಿವರು ಹಾಗೂ ಜಿಲ್ಲಾಧಿಕಾರಿ ಗಳೊಂದಿಗೆ ಜೊತೆ ಚರ್ಚಿಸುತ್ತೇನೆ. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಭೂಮAಜೂರಾತಿ ಸಭೆಗೆ ಸದಸ್ಯರೆಲ್ಲರೂ ಬಂದಿದ್ದರು. ದುರದೃಷ್ಟಕರ ಎಂದರೆ ದರ್ಖಾಸ್ತು ಸಮಿತಿಗೆ ಒಟ್ಟು ೧೭,೦೩೧ ಅರ್ಜಿಗಳು ಬಂದಿವೆ. ಈ ಪೈಕಿ ೧೬,೨೧೬ ಅರ್ಜಿ ವಜಾಗೊಂಡಿವೆ. ಬಾಕಿ ಇರುವ ಅರ್ಜಿಗಳು ೪೬೯. ಭೂಮಂಜೂರಾತಿಗೆ ಅರ್ಹ ಇರುವ ಪ್ರಕರಣ ೪೩. ಭೂಮಂಜೂರಾತಿ ನಿಯಮಾನುಸಾರ ಬಂದಿಲ್ಲದ ಅರ್ಜಿಗಳು ೫೦೮ ಎಂದು ಮಾಹಿತಿ ನೀಡಿದರು.

ಸುಮಾರು ೩೦ ಗುಂಟೆ ಜಮೀನು ಮೇಲ್ಪಟ್ಟು ಜಮೀನು ಇದ್ದೂ ಅರ್ಜಿ ಹಾಕಿರುವ ೧೨೮ ಅರ್ಜಿಗಳನ್ನು ವಜಾ ಮಾಡಲಾಗಿದೆ. ನಿರ್ಬಂಧಿತ ನಗರಸಭೆಯ ೫ ಕಿ.ಮೀ ವ್ಯಾಪ್ತಿ, ಪಟ್ಟಣ ಪಂಚಾಯಿತಿಯ ೩ ಕಿ.ಮೀ ವ್ಯಾಪ್ತಿ ವ್ಯಾಪ್ತಿಯಿಂದಲೇ ಭೂಮಂಜೂರಾತಿ ಕೋರಿ ೭,೯೮೭ ಅರ್ಜಿಗಳು ಬಂದಿವೆ. ಗೋಮಾಳ ಜಮೀನು ಲಭ್ಯವಿಲ್ಲ. ಆದರೂ ಅಂಥ ಪ್ರದೇಶದಲ್ಲಿ ಜಮೀನು ಕೋರಿ ೬,೬೯೨ ಅರ್ಜಿಗಳು ಬಂದಿವೆ. ಇವೆಲ್ಲಾ ವಜಾಗೊಂಡಿವೆ. ಅರ್ಜಿದಾರರು ವಾಸವಿಲ್ಲದ ಸ್ಥಳದಲ್ಲಿ ಜಮೀನು ಕೋರಿ ಬಂದಿದ್ದ ೨೪ ಅರ್ಜಿಗಳು ವಜಾಗೊಂಡಿವೆ. ೬೩೫ ಮಂದಿ ಅನುಭವದಲ್ಲಿ ಇಲ್ಲದವರು ಅರ್ಜಿ ಹಾಕಿದ್ದು, ವಜಾಗೊಂಡಿವೆ ಎಂದರು.

ಸ್ಪೀಕರ್ ಮುಂದೆ ಪೇಪರ್ ಎಸೆಯುವುದು ಸರಿಯೇ :

ಸದನದೊಳಗೆ ಜಾತಿ, ಧರ್ಮ ಎಂಬುದಿಲ್ಲ. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಮುಸ್ಲಿಂ ಆಗಿದ್ದು, ತಮ್ಮ ಪಕ್ಷದವರನ್ನು ಸದನದಿಂದ ಅಮಾನತುಗೊಳಿಸಿದ್ದಾರೆ ಎಂಬ ಶಾಸಕ ಹರೀಶ್ ಪೂಂಜಾ ಮಾತು ಸರಿಯೇ ಎಂದು ಪ್ರಶ್ನಿಸಿದರು.

ವಕ್ಫ್ ಮಂಡಳಿಯನ್ನೇ ರದ್ದು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಲು ಮುಂದಾದರೆ ರಾಜ್ಯಗಳ ಒಪ್ಪಿಗೆಯೂ ಬೇಕಾಗುತ್ತದೆ. ಧರ್ಮಗಳಲ್ಲಿನ ಆಚರಣೆ ಪಾಲನೆ ಮಾಡಲು ಅಡ್ಡಿ ಮಾಡಬಾರದು. ಯಾವುದೇ ಧರ್ಮದ ಬಗ್ಗೆ ಟೀಕೆ ಮಾಡಬಾರದು. ತಾರತಮ್ಯ ಮಾಡಲು ಹೋಗಬಾರದು ಎಂದರು.

ತಹಶಿಲ್ದಾರ್ ಎಂ.ನಯನ, ಸಮಿತಿ ಸದಸ್ಯರಾದ ಸವಿತಾ ಮಂಜುನಾಥ್, ಖಾದ್ರಿಪುರ ಬಾಬು, ಕ್ಯಾಲನೂರು ಬಾಬಾಸಾಬ್ ಸೇರಿದಂತೆ ಅಧಿಕಾರಿಗಳು ಇದ್ದರು.

ಚಿತ್ರ ೦೨ ಕೆ.ಎಲ್.ಆರ್. ೦೨ : ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ಭೂಮಂಜೂರಾತಿ ಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net