ಜಗತ್ತಿಗೆ ಸನ್ಮಾರ್ಗ ತೋರಿದ ಗುರು

Published on


ಯಾದಗಿರಿ: ಹುಟ್ಟಿನಿಂದ ಎಲ್ಲ ಮಾನವರು ಸಮಾನರು. ಜಾತಿ ವ್ಯವಸ್ಥೆ ಕಾಯಕದಿಂದ ಬಂದಿದೆ ಎಂಬುದಾಗಿ ಸಾರಿದ ಬಸವಣ್ಣನವರು ಶೋಷಣೆಗೊಳಗಾದ ಜನರನ್ನು ಮೇಲೆತ್ತಲು ಶ್ರಮಿಸಿದ್ದಾರೆ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.
ಭಾನುವಾರ ಇಲ್ಲಿನ ಜಿಲ್ಲಾಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ತನ್ನ ವಚನಗಳ ಮೂಲಕವೇ ಜ್ಞಾನ ದೀವಿಗೆ ಹಚ್ಚಿದ ವಿಶ್ವಗುರು ಅವರು. ಕರುನಾಡು ಕಂಡ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ತತ್ವ ಆದರ್ಶಗಳನ್ನು ಪಾಲಿಸಿ ಜೀವನ ನಡೆಸಿದರೆ ಬದುಕು ನಂದನವನ ಆಗುತ್ತದೆ ಎಂದು ಪ್ರತಿಪಾದಿಸಿದರು.
ತಮ್ಮ ವಚನಗಳ ಮೂಲಕವೇ ಸಮಾಜ ತಿದ್ದಿ ಸಮಾನತೆ, ಸಹಬಾಳ್ವೆ ಕನಸು ಕಂಡು ಕ್ರಾಂತಿಯ ಬೀಜ ಬಿತ್ತಿದವರು ಅಣ್ಣನವರು. ಎಲ್ಲ ವರ್ಗದವರು ಜತೆಯಾಗಿ ಸಾಗುವ, ಅಂದಶ್ರದ್ಧೆಗಳನ್ನು ಕಿತ್ತೊಗೆಯುವ, ಮೇಲು-ಕೀಳು ಎಂಬ ಭಾವನೆಗಳನ್ನು ಹೋಗಲಾಡಿಸಲೆಂದು ಅನುಭವ ಮಂಟಪವನ್ನು ಸ್ಥಾಪಿಸಿದ್ದರು. ಕ್ರಾಂತಿಯೋಗಿ ಬಸವಣ್ಣನವರ ವಚನ ಸಾಹಿತ್ಯವು ವಿಶ್ವಶ್ರೇಷ್ಠ ಸಾಹಿತ್ಯ ಎನಿಸಿದೆ. ಅವರ ವಚನಗಳು ಸರ್ವರಿಗೂ ಸಮಬಾಳು, ಸಮಪಾಲು ಎಂಬುದನ್ನು ಸಾರುತ್ತದೆ. ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಪುರುಷ, ಮಹಿಳೆಯರ ಸಮಾನತೆಯನ್ನು ವಿರೋಸಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ಜಿಲ್ಲಾ ಆರೋಗ್ಯಾಕಾರಿ ಡಾ. ಗುರುರಾಜ ಹಿರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಉತ್ತರಾದೇವಿ ಮಠಪತಿ, ರೇಖಾ ಮ್ಯಾಗೇರಿ, ಕಾಮರ್ಿಕ ಇಲಾಖೆ ಜಿಲ್ಲಾ ಅಕಾರಿ ಉಮಾಶ್ರೀ ಕೋಳಿ, ಸಾಬಯ್ಯ ಕಲಾಲ್, ನಾಗರಾಜ ನಾಗೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net