ಜಂಬೂ ಸವಾರಿಯಲ್ಲಿ 14 ಆನೆಗಳು ಭಾಗಿ

12
Published on

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆಯ ಎಲ್ಲ ಆನೆಗಳು ಭಾಗವಹಿಸಲಿವೆ.

ಈಗಾಗಲೇ ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪತ್ ಆನೆಯಾಗಿ ಗೋಪಿಯನ್ನು ಆಯ್ಕೆ ಮಾಡಲಾಗಿದ್ದು, ಮೆರವಣಿಗೆಯಲ್ಲಿ ಇಡೀ ಜಂಬೂ ಸವಾರಿಯನ್ನು ಧನಂಜಯ ಮುನ್ನಡೆಸಿದರೆ, ಹಿಂದೆ ಗೋಪಿ ಸಾಗಲಿದೆ.

ಬಳಿಕ ಸಾಲಾನೆಯ ಮೊದಲ ತಂಡದಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ ಆನೆ ಬರಲಿವೆ. 2ನೇ ತಂಡದಲ್ಲಿ ಕಂಜನ್, ಭೀಮ ಮತ್ತು ಏಕಲವ್ಯ ಸಾಗಿದರೆ 3ನೇ ತಂಡದಲ್ಲಿ ಪ್ರಶಾಂತ, ಸುಗ್ರೀವ ಹಾಗೂ ಹೇಮಾವತಿ ಆನೆಗಳು ಬರಲಿವೆ. ಕೊನೆಗೆ ಅಂಬಾರಿ ಹೊತ್ತು ಅಭಿಮನ್ಯು ಬಂದರೆ ಅದರ ಜತೆಗೆ ಕಾವೇರಿ ಮತ್ತು ರೂಪಾ ಆನೆಗಳು ಇರಲಿವೆ.

ಆದರೆ ರಾಜವಂಶಸ್ಥರ ಖಾಸಗಿ ದರ್ಬಾರ್ ಸೇರಿದಂತೆ ಧಾರ್ಮಿಕ ಆಚರಣೆಗಳ ಮುಹೂರ್ತ ಬದಲಾಗಿ, ಸಮಯದಲ್ಲಿ ಏರುಪೇರಾದರೆ ಜಂಬೂ ಮೆರವಣಿಗೆಯಿಂದ ಕೆಲ ಆನೆಗಳು ಹೊರಗುಳಿಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net