

ಕಲಬುರಗಿ: ಹೊಸ ವರ್ಷ ನಿಮಿತ್ತ `ಬೇಡ ಮದ್ಯಪಾನ ಮಾಡು ಯೋಗ ಧ್ಯಾನ' ಘೋಷವಾಕ್ಯದೊಂದಿಗೆ ಉಚಿತ ಆನ್ಲೈನ್ ಯೋಗ ತರಬೇತಿ ಶಿಬಿರ ಜ.1ರಿಂದ 30ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಪೀಠದ ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ತಿಳಿಸಿದರು.
ಕರೊನಾ ಹೊತ್ತಿನಲ್ಲಿ ಜನರು ಮನೆಯಿಂದ ಹೊರಬರಲು ಲೆಕ್ಕ ಹಾಕುತ್ತಿರುವುದು ಮತ್ತು ಹೊಸ ವಷರ್ಾಚರಣೆ ವೇಳೆ ಜನರನ್ನು ಪಾಶ್ಚಿಮಾತ್ಯ ಸಂಸ್ಕೃತಿ ಬಿಟ್ಟು ಸ್ವದೇಶಿ ಕಡೆಗೆ ಕರೆತರಲು 3ನೇ ಬಾರಿ ಅನ್ಲೈನ್ ಯೋಗ ಮತ್ತು ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪತಂಜಲಿ ಪೀಠದ ಬಾಬಾ ರಾಮದೇವ್ ಅವರಿಂದ ತರಬೇತಿ ಪಡೆಯುವ ಅವಕಾಶ ಸಿಗಲಿದೆ. ಪತಂಜಲಿ ಯೋಗ ಪೀಠ ಹರಿದ್ವಾರದ ಪೂಜ್ಯ ಯೋಗ ಋಷಿ ಸ್ವಾಮಿಗಳ ಜತೆಗೆ ಕೇಂದ್ರೀಯ ಪ್ರಭಾರಿ ಸಾದ್ವಿ ದೇವಪ್ರಿಯಜಿ, ಡಾ.ಜಯದೀಪ ಆರ್ಯಜಿ ಹಾಗೂ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಸೇರಿ 50ಕ್ಕೂ ಹೆಚ್ಚು ಅನುಭವಿ ಯೋಗ ತಜ್ಞರು ತರಬೇತಿ ನೀಡಲಿದ್ದಾರೆ ಎಂದರು.
ಯೋಗ ತರಬೇತಿಯಂಥ ವೃತ್ತಿಯಲ್ಲಿ ತೊಡಗುವ ಆಸಕ್ತರು 1099 ರೂ. ಕೊಟ್ಟು ಈ ಶಿಬಿರದಲ್ಲಿ ಭಾಗವಹಿಸಬಹುದು. ಅವರಿಗೆ ಪೂರಕ ಕಿಟ್ ಕೊಡಲಾಗುತ್ತದೆ. ಪರೀಕ್ಷೆ ಬರೆಯಬೇಕಾಗುತ್ತದೆ. ಪ್ರಮಾಣಪತ್ರ ಪಡೆದವರು ಯೋಗ ಕೇಂದ್ರ ತೆರೆಯಬಹುದಾಗಿದೆ. ಆನ್ಲೈನ್ನಲ್ಲಿ ಹಾಜರಾಗಲು ವಿದ್ಯಾರ್ಹತೆ ಬೇಕಿಲ್ಲ. 8ರಿಂದ 80 ವರ್ಷದವರೆಗಿನವರು ಪಾಲ್ಗೊಳ್ಳಬಹುದು. ಹೆಸರು ನೋಂದಾಯಿಸಿದವರಿಗೆ ಲಿಂಕ್ ಕಳುಹಿಸಲಾಗುತ್ತದೆ. ಫೇಸ್ಬುಕ್, ಝೂಮ್ ಆ್ಯಪ್ ಮೂಲಕ ಆನ್ಲೈನ್ ತರಬೇತಿಗೆ ಹಾಜರಾಗಬಹುದು. ಮಾಹಿತಿಗಾಗಿ 90081 00878, 94484 63373. 98860 94689, 89711 59845ಗೆ ಸಂಪಕರ್ಿಸಬಹುದು ಎಂದು ತಿಳಿಸಿದರು.
ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಮಚೇಂದ್ರನಾಥ ಮುಲಗೆ, ಸೋಷಿಯಲ್ ಮೀಡಿಯಾ ಮಂಡಲ್ ಪ್ರಭಾರಿ ಉಷಾ ಭಗತ್, ಭಾರತ ಸ್ವಾಭಿಮಾನ ಸಹ ಪ್ರಭಾರಿ ಎಚ್.ಸುಭಾಶ್ಚಂದ್ರ, ಪ್ರಧಾನ ಕಾರ್ಯದಶರ್ಿ ಮಂಜುಳಾ ತಡಿಬಿಡಿಮಠ ಇದ್ದರು.