ಛಾಯಾ ಭಟ್‌ಗೆ ಛಂದ ಪುಸ್ತಕ ಬಹುಮಾನ

Published on

ಬೆಂಗಳೂರು: ಛಂದ ಪುಸ್ತಕದ ಈ ವರ್ಷದ ಪುಸ್ತಕ ಬಹುಮಾನವನ್ನು ಛಾಯಾ ಭಟ್ ಪಡೆದುಕೊಂಡಿದ್ದಾರೆ.
ಕುಮಟಾ ತಾಲೂಕಿನ ಹೊಲನಗದ್ದೆ ಊರಿನವರಾದ ಛಾಯಾ ಭಟ್ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಈಗ ಬೆಂಗಳೂರಿನಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚು ಕತೆಗಾರರು ಭಾಗವಹಿಸಿದ್ದ ಈ ಸ್ಪರ್ಧೆಯ ಆಯ್ಕೆಯನ್ನು ಆರ್. ತಾರಿಣಿ ಶುಭದಾಯಿನಿ ಅವರು ಮಾಡಿದ್ದಾರೆ. ಬಹುಮಾನವು 30 ಸಾವಿರ ರೂ. ನಗದು, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಪುಸ್ತಕವನ್ನು ಅಕ್ಟೋಬರ್‌ನಲ್ಲಿ ಪ್ರಕಟಣೆ ಮಾಡಲಾಗುವುದು ಎಂದು ಛಂದ ಪುಸ್ತಕದ ವಸುಧೇಂದ್ರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net