

ಶಿಕಾರಿಪುರ: ಅಡಕೆ ಬೆಳೆಗಾರರಿಗೆ ಚೇಣಿದಾರರು ಅನ್ಯಾಯ ಮಾಡಲು ಮುಂದಾಗಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆ ಸದಸ್ಯರು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕಳೆದ ಐದಾರು ದಶಕಗಳಿಂದಲೂ ತಾಲೂಕಿನಲ್ಲಿ ರೈತರು ಸಣ್ಣ ಪ್ರಮಾಣದಲ್ಲಿ ನೀರಿನ ಅನುಕೂಲ ಇರುವ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದರು. ಆದರೆ ಈಗ ನಮ್ಮ ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಯ ಲವಾಗಿ ಬೋರ್‌ಗಳು ರೀಚಾರ್ಜ್ ಆಗುತ್ತಿರುವುದರಿಂದ ಸುಮಾರು 22 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಆದರೆ ಖರೀದಿ ಮಾಡುವಂತಹ ಚೇಣಿದಾರರು ಅಡಕೆ ಬೆಳೆಗಾರರಿಗೆ ಖರೀದಿಗೆ ನಿಬಂಧನೆ ಹಾಕುತ್ತಿದ್ದಾರೆ. ಜತೆಗೆ ಚೇಣಿದಾರರು ಸಂಘಟನೆ ರಚಿಸಿಕೊಂಡು ರೈತರಿಗೆ ಬ್ಲಾೃಕ್‌ಮೇಲ್ ರೀತಿ ಖರೀದಿಗೆ ಮುಂದಾಗಿದ್ದಾರೆ. ತಾಲೂಕಿನ ರೈತರು ಚೇಣಿದಾರರ ಈ ನಿಬಂಧನೆಗಳನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡಕೆ ಬೆಳೆಗಾರರು ತಮಗೆ ಇಷ್ಟ ಬಂದವರಿಗೆ ಅಡಕೆ ನೀಡುತ್ತಾರೆ. ಇದಕ್ಕೆ ಚೇಣಿದಾರರ ಒತ್ತಡದ ಅಗತ್ಯವಿಲ್ಲ. ಸಂಬಂಧಿಸಿದವರು ಅಡಕೆ ಬೆಳೆಗಾರರ ಮೇಲೆ ಒತ್ತಡ ಹೇರುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ತಾಲೂಕಿನ ರೈತರು ಇವರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ರೈತರ ಹಿತರಕ್ಷಣಾ ವೇದಿಕೆ ಸಂಚಾಲಕ ಬೆಣ್ಣೆ ಪ್ರವೀಣ್, ಪ್ರಮುಖರಾದ ಗಿಡ್ಡಪ್ಪ ಮಟ್ಟೇರ್, ರಾಘವೇಂದ್ರ, ಮಲ್ಲೇಶಪ್ಪ, ಈಶ್ವರಪ್ಪ, ಶೇಖರಪ್ಪ, ಮಂಜುನಾಥ್, ದೊಡ್ಡಪ್ಪ, ಅರುಣ್, ನಂಜುಂಡಿ, ಸಂದೀಪ, ಪರಶುರಾಮ, ರಘು ಇತರರಿದ್ದರು.