

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಚಿರತೆ ಕಳೇಬರ ಪತ್ತೆಯಾಗಿದೆ.
ಗ್ರಾಮದ ಹೊರವಲಯದಲ್ಲಿರುವ ಜೋಳನೆರೆ ಬಂಡೆ ನಡುವೆ ಸಿಕ್ಕಿ ಹಾಕಿಕೊಂಡ ರೀತಿಯ ಸ್ಥಿತಿಯಲ್ಲಿ ಗಂಡು ಚಿರತೆ ಕಳೇಬರ ಕಂಡುಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಆರ್‌ಎಫ್‌ಒ ಪದ್ಮಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆಯ ಮೃತದೇಹದ ಮರಣೋತ್ತರ ಪರೀಕ್ಷೆ ಭಾನುವಾರ ನಡೆಯಲಿದೆ. ಚಿರತೆ ವಯಸ್ಸು, ಸಾವಿಗೆ ಕಾರಣ, ಇತರ ಮಾಹಿತಿಗಳು ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.