ಚಿನ್ನದ ಸರ ಕಸಿದು ಪರಾರಿ

Published on

ನಂಜನಗೂಡು: ನಗರದ ಶ್ರೀಕಂಠಪುರಿ ಬಡಾವಣೆಯ 18 ಕ್ರಾಸ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಹಾಡಹಗಲೇ ಗೃಹಿಣಿಯ ಕುತ್ತಿಗೆಯಿಂದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ, ತಾಲೂಕಿನ ದೇಬೂರು ಗ್ರಾಮದ ನಾಗರಾಜು ಪತ್ನಿ ಪದ್ಮಮ್ಮ (57) ಅವರು ಸುಮಾರು 30 ಗ್ರಾಂ ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ.
ಪದ್ಮಮ್ಮ ಅವರು ಮಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಿಸಿದ್ದು, ಶುಕ್ರವಾರ ಬೆಳಗ್ಗೆ ತಿಂಡಿ ತರಲು ನಡೆದುಕೊಂಡು ಹೋಗುತ್ತಿದ್ದಾಗ ಕಳವು ನಡೆದಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net