ಚಿನ್ನದ ವ್ಯಾಪಾರಿ ಸನ್ಯಾಸತ್ವ ಸ್ವೀಕಾರ

1111
Published on

ಬೆಳಗಾವಿ: ಗೋಕಾಕದ ಚಿನ್ನಾಭರಣ ವ್ಯಾಪಾರಿ ಗೌತಮಚಂದ ರಾಠೋಡ ಅವರ ಪುತ್ರಿ ವಿಶಾಖಾಕುಮಾರಿ ಗುರುವಾರ ಸನ್ಯಾಸತ್ವ ದೀಕ್ಷೆ ಪಡೆದರು. ಗೋಕಾಕದ ಶ್ರೀಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಗ್ಗೆ 8ಕ್ಕೆ ಸಾಂಸಾರಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದರು.

ಬಾಲ್ಯದಿಂದಲೂ ಓದಿನಲ್ಲಿ ಚುರುಕು, ಜತೆಗೆ ಅಧ್ಯಾತ್ಮದತ್ತಲೂ ಒಲವು ಹೊಂದಿದ್ದ ವಿಶಾಖಾಕುಮಾರಿ ಇದೀಗ ದೀಕ್ಷಾ ಪಡೆದಿದ್ದಾರೆ. ಜೈನ ಧರ್ಮದ ವಿಧಿ-ವಿಧಾನಗಳಂತೆ ಆಚಾರ್ಯ ಭಗವಂತ ಶ್ರೀ ಶ್ರೇಯಾಂಸಪ್ರಭುಸೂರೀಶ್ವರಜಿ ಮಹಾರಾಜರ ಶಿಷ್ಯರಾದ ಸಮ್ಯಗದರ್ಶನವಿಜಯಿಜಿ ಮಹಾರಾಜರ ಸಾನ್ನಿಧ್ಯದಲ್ಲಿ ದೀಕ್ಷಾ ಶ್ರೇಯ ಪಂಥೋತ್ಸವ ಜರುಗಿತು.

ಸಮಾರಂಭದಲ್ಲಿ ವಿವಿಧ ಜೈನ ಬಸದಿಯ ಮುನಿಗಳು ಹಾಗೂ ಜೈನ ಸಮುದಾಯದ ಮುಖಂಡರು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು. ದೀಕ್ಷಾರ್ಥಿಗಳು ತ್ಯಾಗದ ಸಂಕೇತವಾಗಿ ದವಸ, ಧಾನ್ಯ ಹಾಗೂ ಇತರ ಸಾಮಗ್ರಿಗಳನ್ನು ಬಡವರಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net